ಭಯಾನಕ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಹಾಸನ: ಭಾರತದಲ್ಲಿ ಈ ಸಂವತ್ಸರದಲ್ಲಿ ಬಹುದೊಡ್ಡ ಅವಘಡ ನಡೆಯುತ್ತದೆ ಎಂದು ಕೋಡಿಮಠದ ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.
ಈ ವರ್ಷದ ಭವಿಷ್ಯ ನಡಿದ ಅವರು ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಅವರು ಅಶಾಂತಿ, ಮತೀಯಗಲಭೆ, ದೊಂಬಿಗಳು, ಸಾವು-ನೋವುಗಳು ಕೊಲೆಗಳಾಗುತ್ತವೆ. ಅಶಾಂತಿ, ಮತೀಯಗಲಭೆ, ದೊಂಬಿಗಳು, ಸಾವು-ನೋವುಗಳು ಕೊಲೆಗಳಾಗುತ್ತವೆ. ವಿಶೇಷವಾಗಿ ಎಲೆಕ್ಟ್ರಿಕ್‍ನಿಂದ ಅಪಾಯವಿದೆ. ಸುಂದರವಾದ ಹೆಣ್ಣುಮಕ್ಕಳ ಅಂಗಾಗಳನ್ನು ಕಿತ್ತು ತಿನ್ನುತಾರೆ ಎಂದು ಅರಸೀಕೆರೆ ಕೋಡಿಮಠದ.
ಅಲ್ಲದೇ ರಾಜಕೀಯ ವಿಪಲ್ಲವಾಗುತ್ತೆ, ರಾಜಕೀಯ ಗುಂಪುಗಳಾಗುತ್ತವೆ. ಬೆಂಕಿಯ ಅನಾಹುತ ಜಾಸ್ತಿ, ಗಾಳಿ, ಸಿಡಿಲು, ಗುಡುಗು ವಿಪರೀತ. ಇಲ್ಲಿಯತನಕ ಕಂಡು ಕೇಳರಿಯದ ಬಹುದೊಡ್ಡ ಅಘಾತ ಭಾರತದಲ್ಲಿ ಆಗುತ್ತದೆ ಎಂದಿದ್ದಾರೆ.
ಈ ವರ್ಷ ಮಳೆ ಕಂಡಮಂಡಲ. ಆದಲ್ಲಿ ಆಯಿತು ಹೋದಲ್ಲಿ ಹೋಯಿತು. ಮಲೆನಾಡು ಹೋಗಿ ಬಯಲು ಆಗುತ್ತದೆ, ಬಯಲು ಹೋಗಿ ಮಲೆನಾಡು ಆಗುತ್ತದೆ. ಆ ತರ ಅವಕಾಶ ಮಳೆಗೆ ಇದೆ. ಭಾರತದಲ್ಲಿ ಈ ಸಂವತ್ಸರದಲ್ಲಿ ಬಹುದೊಡ್ಡ ಅವಘಡ ನಡೆಯುತ್ತದೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ. ಮುಂಗಾರು ಚೆನ್ನಾಗಿ ಆಗುತ್ತದೆ, ಹಿಂಗಾರು ಕಡಿಮೆ ಎಂದು ತಿಳಿಸಿದ್ದಾರೆ.








