ಥೂ… ಹೀನಾಯ ಮನಸ್ಥಿತಿ – ಕೊಹ್ಲಿ ಮಗಳಿಗೆ ಬೆದರಿಕೆ- ಮಹಿಳಾ ಆಯೋಗದಿಂದ ದೂರು ದಾಖಲು

1 min read

ಥೂ… ಹೀನಾಯ ಮನಸ್ಥಿತಿ – ಕೊಹ್ಲಿ ಮಗಳಿಗೆ ಬೆದರಿಕೆ- ಮಹಿಳಾ ಆಯೋಗದಿಂದ ದೂರು ದಾಖಲು

 Delhi Commission for Womenಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾದ ಪ್ರದರ್ಶನದಿಂದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಅದರಲ್ಲೂ ಪಾಕ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತಾಗ ಟೀಮ್ ಇಂಡಿಯಾ ವಿರುದ್ಧ ಟೀಕೆಗಳ ಸುರುಮಳೆಯಾಗಿತ್ತು.
ಅಂದ ಹಾಗೇ ಆಟದಲ್ಲಿ ಸೋಲು ಗೆಲುವು ಅನ್ನೋದು ನಾಣ್ಯದ ಎರಡು ಮುಖಗಳಿದ್ದಂತೆ. ಆದ್ರೂ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪಾಕ್ ಗೆ ತಲೆಬಾಗಿದ್ದು ಇದೇ ಮೊದಲ ಬಾರಿ.
ಹಾಗೇ ನ್ಯೂಜಿಲೆಂಡ್ ವಿರುದ್ಧವೂ ಟೀಮ್ ಇಂಡಿಯಾ ಮುಗ್ಗರಿಸಿದೆ. ಹೀಗಾಗಿ ಟೀಮ್ ಇಂಡಿಯಾದ ಸೆಮೀಸ್ ಕನಸು ತೂಗೂಯ್ಯಾಲೆಯಲ್ಲಿದೆ.
ಟೀಮ್ ಇಂಡಿಯಾ ಆಟಗಾರರು ಕಳಪೆ ಪ್ರದರ್ಶನ ನೀಡಿದಾಗ ಅಭಿಮಾನಿಗಳ ಸಿಟ್ಟು ನೆತ್ತಿಗೇರುವುದು ಇದೇನೂ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಟೀಮ್ ಇಂಡಿಯಾ ಆಟಗಾರರ ಭಾವಚಿತ್ರಗಳಿಗೆ ಚಪ್ಪಳಿ ಏಟು, ಮನೆಗಳಿಗೆ ಕಲ್ಲು ತೂರಾಟ ನಡೆಸಿರುವ ಘಟನೆಗಳಿವೆ.
ಹಾಗೇ ಇದೀಗ ಟೀಮ್ ಇಂಡಿಯಾದ ಕಳಪೆ ಪ್ರದರ್ಶನದ ಸಿಟ್ಟು ವಿರಾಟ್ ಕೊಹ್ಲಿ ಮಗಳ ಮೇಲೆ ಬಿದ್ದಿದೆ.
ತುಚ್ಯ ಮನಸ್ಥಿತಿಯ ವ್ಯಕ್ತಿ ಒಬ್ಬ, ಏನು ಅರಿಯದ 9 ತಿಂಗಳ ಮಗುವಿಗೆ ಅತ್ಯಚಾರದ ಬೆದರಿಕೆಯನ್ನು ಒಡ್ಡಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿಯ ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಅಲ್ಲದೆ ಈ ಕುರಿತಂತೆ ದೆಹಲಿ ಪೋಲಿಸರು ದಾಖಲಿಸಿರುವ ಎಫ್ ಐ ಆರ್ ಮತ್ತು ಆರೋಪಿಗಳ ವಿವರಗಳನ್ನು ನವೆಂಬರ್ 8ರ ಒಳಗಡೆ ನೀಡುವಂತೆ ದೆಹಲಿಯ ಸಹಾಯಕ ಕಮೀಷನರ್ ಪೊಲೀಸರಿಗೆ ಸೂಚಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd