ಕೋಲಾರ: ಭಾರತೀಯರು ಹಲವು ವರ್ಷಗಳಿಂದ ಕಾಯುತ್ತಿರುವ ರಾಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಜನವರಿ 22ರಂದು ಉದ್ಘಾಟನೆಯಾಗಲಿದೆ. ಈ ಕಾರ್ಯಕ್ರಮಕ್ಕೆ ಕೋಲಾರದ ಅರ್ಚಕರೊಬ್ಬರಿಗೆ ಆಹ್ವಾನ ಬಂದಿದೆ.
ಪ್ರಮುಖರಿಗೆ ಆಹ್ವಾನ ಪತ್ರಿಕೆಗಳನ್ನು ಕಳುಹಿಸಲಾಗುತ್ತಿದ್ದು, ಅರ್ಚಕರಿಗೆ ಆಹ್ವಾನ ಪತ್ರಿಕೆ ಬಂದಿದೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಲು ಕೋಲಾರ ಮೂಲದ ಅರ್ಚಕ ರಮೇಶ್ ಭಟ್ (Ramesh Bhat) ಅವರನ್ನು ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಪರಿಚಾರಕ ಋತ್ವಿಕ್ ರಾಗಿ ಭಾಗವಹಿಸಲು ರಾಮಮಂದಿರ ದೇವಾಲಯ ಪ್ರತಿಷ್ಠಾಪನಾ ಸಮಿತಿಯು ಆಹ್ವಾನಿಸಿದೆ ಎಂದು ತಿಳಿದು ಬಂದಿದೆ. ರಮೇಶ್ ಭಟ್ ಎಂಬುವವರೇ ಈ ಅರ್ಚಕರು ಎನ್ನಲಾಗಿದೆ.