ಕೊರೊನಾ ನಿಯಮ ಗಾಳಿಗೆ ತೂರಿ ಫಾಲ್ಸ್ ನಲ್ಲಿ ಮೋಜು ಮಸ್ತಿ

1 min read

ಕೊರೊನಾ ನಿಯಮ ಗಾಳಿಗೆ ತೂರಿ ಫಾಲ್ಸ್ ನಲ್ಲಿ ಮೋಜು ಮಸ್ತಿ

ಬಾಗಲಕೋಟೆ : ಜಿಲ್ಲೆಯಲ್ಲಿ ಕೊರೊನಾ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೆಲವರು ಫಾಲ್ಸ್‍ನಲ್ಲಿ ಬಿಂದಾಸ್ ಆಗಿ ಎಂಜಾಯ್ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ.

ಜಿಲ್ಲೆಯ ಗುಳೇದ ಗುಡ್ಡ ತಾಲೂಕಿನ ಕೋಟೆಕಲ್ ಫಾಲ್ಸ್ ನಲ್ಲಿ ಜನರು ಮೋಜು ಮಸ್ತಿ ಮಾಡುತ್ತಿದ್ದಾರೆ.

ಈಗ ಜಿಲ್ಲೆಯಲ್ಲಿ ಸದ್ಯ ಭಾರಿ ಮಳೆಯಾಗುತ್ತಿದ್ದು, ಕೋಟೆಕಲ್ ಗ್ರಾಮದ ವಲಯದಲ್ಲಿ ಫಾಲ್ಸ್ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

kotekal-falls

ಲಾಕ್ ಡೌನ್ ನಿಂದ ಮನೆಯಲ್ಲಿ ಕಾಲ ಕಳೆಯುತ್ತಿದ್ದ ಮಂದಿ ಈಗ ಫಾಲ್ಸ್ ಬಳಿ ಬಂದು ಬಿಂದಾಸ್ ಆಗಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.

ರಾಜ್ಯದಲ್ಲಿ ಕೊರೊನಾಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ.

ಆದರೆ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿದ ಯುವ ಜನತೆ ಸಾಮಾಜಿಕ ಅಂತರ ಮರೆತು ಸಾಮೂಹಿಕವಾಗಿ ಫಾಲ್ಸ್‍ನಲ್ಲಿ ಸ್ನಾನದಲ್ಲಿ ತೊಡಗಿದ್ದಾರೆ.

corona cases

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd