ಕಾಂಗ್ರೆಸ್ ಆರೋಪ ನಿರಾಧಾರ ಎಂದಾದರೆ 30ಕ್ಕಿಂತ ಹೆಚ್ಚು ಜನರನ್ನು ಬಂಧಿಸಿದ್ದು ಏಕೆ?
ಬೆಂಗಳೂರು : ಪಿಎಸ್ಐ ನೇಮಕಾತಿ ಹಗರಣ ಕುರಿತ ಕಾಂಗ್ರೆಸ್ ಆರೋಪ ನಿರಾಧಾರ ಎಂದಾದರೆ 30ಕ್ಕಿಂತ ಹೆಚ್ಚು ಜನರನ್ನು ಬಂಧಿಸಿದ್ದು ಏಕೆ? ಎಂದು ಬಿಜೆಪಿಯನ್ನ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ. KPCC ramalinga reddy questions bjp
ಪಿಎಸ್ ಐ ನೇಮಕಾತಿ ಹಗರಣ ಕುರಿತಾಗಿ ಬಿಜೆಪಿ ತನ್ನ ಟ್ವೀಟ್ ನಲ್ಲಿ ಕಾಂಗ್ರೆಸ್ ಪ್ರೇರಿತ ಜಿಹಾದಿಗಳು ಹುಬ್ಬಳ್ಳಿಯಲ್ಲಿ ನಡೆಸಿದ ಗಲಭೆ ಹಾಗೂ ಮೈಸೂರಿನಲ್ಲಿ ಛೋಟಾ ಪಾಕಿಸ್ತಾನ ಕೂಗು ಪ್ರಕರಣದಲ್ಲಿ ನಮ್ಮ ಸರ್ಕಾರ ಕ್ಷಿಪ್ರ ಕಾರ್ಯಾಚರಣೆ ಮೂಲಕ ಸಮಾಜ ವಿದ್ರೋಹಿಗಳ ಹೆಡೆಮುರಿ ಕಟ್ಟಿದೆ. ನಿರಂತರ ಸೋಲು ಮತ್ತು ಅಧಿಕಾರವಿಲ್ಲದ ಹತಾಶೆಯಿಂದ ಕಾಂಗ್ರೆಸ್ ವೃಥಾರೋಪ ಮಾಡುತ್ತಿದೆ ಎಂದು ಆರೋಪಿಸಿದೆ.
ಪಿಎಸ್ಐ ನೇಮಕಾತಿ ಹಗರಣ ಕುರಿತ ಕಾಂಗ್ರೆಸ್ ಆರೋಪ ನಿರಾಧಾರ ಎಂದಾದರೆ 30ಕ್ಕಿಂತ ಹೆಚ್ಚು ಜನರನ್ನು ಬಂಧಿಸಿದ್ದು ಏಕೆ?
ದಾಖಲೆಗಳು ಇಲ್ಲ ಎಂದಾದರೆ ಪ್ರಕರಣದ ತನಿಖೆ ಏಕೆ ಮಾಡುತ್ತಿದ್ದೀರಿ? ಪರೀಕ್ಷೆಯನ್ನು ರದ್ದು ಮಾಡಿದ್ದು ಏಕೆ?
ಬಿಜೆಪಿ ಸರ್ಕಾರ, ತಮ್ಮ ಬಣ್ಣ ಬಯಲಾಗುವ ಭಯದಿಂದ "ಕಾಂಗ್ರೆಸ್ ಆರೋಪ ನಿರಾಧಾರ" ಎನ್ನುತ್ತಿದೆ.
– @RLR_BTM pic.twitter.com/psXyHg43K4— Karnataka Congress (@INCKarnataka) May 7, 2022
ಇದಕ್ಕೆ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದು, ಪಿಎಸ್ಐ ನೇಮಕಾತಿ ಹಗರಣ ಕುರಿತ ಕಾಂಗ್ರೆಸ್ ಆರೋಪ ನಿರಾಧಾರ ಎಂದಾದರೆ 30ಕ್ಕಿಂತ ಹೆಚ್ಚು ಜನರನ್ನು ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ದಾಖಲೆಗಳು ಇಲ್ಲ ಎಂದಾದರೆ ಪ್ರಕರಣದ ತನಿಖೆ ಏಕೆ ಮಾಡುತ್ತಿದ್ದೀರಿ? ಪರೀಕ್ಷೆಯನ್ನು ರದ್ದು ಮಾಡಿದ್ದು ಏಕೆ? ಬಿಜೆಪಿ ಸರ್ಕಾರ, ತಮ್ಮ ಬಣ್ಣ ಬಯಲಾಗುವ ಭಯದಿಂದ “ಕಾಂಗ್ರೆಸ್ ಆರೋಪ ನಿರಾಧಾರ” ಎನ್ನುತ್ತಿದೆ ಎಂದು ರಾಮಲಿಂಗಾ ರೆಡ್ಡಿ ಕುಟುಕಿದ್ದಾರೆ. KPCC ramalinga reddy questions bjp