ಲೋಕಸೇವಾ ಆಯೋಗ(Karnataka Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
230 ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ (RPC) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು. ಸೆಪ್ಟೆಂಬರ್ 1 ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಲಿದೆ.
ಗ್ರೂಪ್ ‘ಸಿ’ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿನ ವಾಣಿಜ್ಯ ತೆರಿಗೆ ಪರವೀಕ್ಷಕರ ಹುದ್ದೆಗಳನ್ನು ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಲೋಕ ಸೇವಾ ಆಯೋಗ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಸೆಪ್ಟೆಂಬರ್ 30, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು
SC/ST/ ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ 2ಎ/2ಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷ
PH/ ವಿಧವಾ ಅಭ್ಯರ್ಥಿಗಳು- 10 ವರ್ಷ
ವೇತನವು ಮಾಸಿಕ 33,450 ರೂ. ನಿಂದ 62,600 ವರೆಗೆ ಇರಲಿದೆ