Krishna Pandey | 6 ಎಸೆತಕ್ಕೆ 6 ಸಿಕ್ಸರ್ಸ್.. ಟಿ 10 ಕ್ರಿಕೆಟ್ ನಲ್ಲಿ ಹೊಸ ದಾಖಲೆ..!!
ಟಿ 10 ಕ್ರಿಕೆಟ್ ನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಪ್ರಸ್ತುತ ನಡೆಯುತ್ತಿರುವ ಪಾಂಡಿಚೇರಿ ಟಿ 10 ಲೀಗ್ ನಲ್ಲಿ ಪೇಟ್ರಿಯಾಟ್ಸ್ ಯುವ ಆಟಗಾರ ಕೃಷ್ಣ ಪಾಂಡೆ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ಅಪರೂಪದ ದಾಖಲೆ ಬರೆದಿದ್ದಾರೆ. ಶನಿವಾರ ನಡೆದ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೃಷ್ಣ ಪಾಂಡೆ ಅಬ್ಬರಿಸಿದರು.
ಪೇಟ್ರಿಯಾಟ್ಸ್ ಇನ್ನಿಂಗ್ಸ್ ನ ಆರನೇ ಓವರ್ ನಲ್ಲಿ ಸತತ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದರು.
ಅಲ್ಲದೇ ಪಾಂಡೆ ಕೇವಲ 19 ಎಸೆತಗಳಲ್ಲಿ 12 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 83 ರನ್ ಗಳಿಸಿದರು.
ಆದ್ರೆ ಈ ಪಂದ್ಯದಲ್ಲಿ ಅನಿರೀಕ್ಷಿತವಾಗಿ ಪೇಟ್ರಿಯಾಟ್ಸ್ 4 ರನ್ ಗಳಿಂದ ಸೋಲುಂಡಿತು.

158 ರನ್‌ಗಳ ಗುರಿಯೊಂದಿಗೆ ಮೈದಾನಕ್ಕಿಳಿದ ಪೇಟ್ರಿಯಾಟ್ಸ್ ತಂಡವು 10 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತು. ಆ ಮೂಲಕ ನಾಲ್ಕು ರನ್ ಗಳಿಂದ ಸೋಲು ಕಂಡಿದೆ.
ಇನ್ನು ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದರು.
ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಾಜಿ ನಾಯಕ ಕಿರಣ್ ಪೊಲಾರ್ಡ್ ಕೂಡ ಈ ಅಪರೂಪದ ಸಾಧನೆ ಮಾಡಿದ್ದಾರೆ.
ಆದರೆ ಟಿ10 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾಂಡೆ ಪಾತ್ರರಾಗಿದ್ದಾರೆ.








