ಕೃತಿ ಸನೋನ್ ಇತ್ತೀಚೆಗೆ 2024ರ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನೆಪೋಟಿಸಂ ಕುರಿತು ಪ್ರಾಮಾಣಿಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ನೆಪೋಟಿಸಂಗೆ ಬಾಲಿವುಡ್ ಮಾತ್ರ ಕಾರಣವಲ್ಲ, ಮಾಧ್ಯಮ ಮತ್ತು ಪ್ರೇಕ್ಷಕರಿಗೂ ಇದರಲ್ಲಿ ಪಾತ್ರವಿದೆ ಎಂದು ತಿಳಿಸಿದ್ದಾರೆ. ಮಾಧ್ಯಮಗಳು ಸ್ಟಾರ್ ಕಿಡ್ಸ್ ಕುರಿತಂತೆ ಹೆಚ್ಚು ಗಮನ ನೀಡುವುದರಿಂದ ಪ್ರೇಕ್ಷಕರು ಅವರಲ್ಲಿ ಆಸಕ್ತಿ ತೋರುತ್ತಾರೆ. ಈ ಪ್ರೇಕ್ಷಕರ ಆಸಕ್ತಿಯ ಕಾರಣದಿಂದ ಇಂಥವರನ್ನು ತೆಗೆದುಕೊಳ್ಳಲು ಚಿತ್ರರಂಗ ಪ್ರೇರಿತವಾಗುತ್ತದೆ ಎಂಬುದು ಅವರ ನಿಲುವಾಗಿದೆ.
ನಾನು ನೆಪೋ ಕಿಡ್ ಅಲ್ಲ. ಚಿತ್ರರಂಗದ ಯಾವುದೇ ಹಿನ್ನೆಲೆ ಇಲ್ಲದಿದ್ದರೂ ಸಕ್ಸಸ್ ಕಂಡಿದ್ದೇನೆ ಎಂದು ಸಹ ಹೇಳಿದರು.