IPL | ಶೀಘ್ರದಲ್ಲಿಯೇ ಟೀಂ ಇಂಡಿಯಾ ಸೇರಲಿದ್ದಾರೆ ಕುಲ್ದೀಪ್ ಸೆನ್
ಸೋಲು ಗೆಲುವುಗಳನ್ನು ನಿರ್ಧಾರಿಸುವ ಅಂತಿಮ ಓವರ್ ನಲ್ಲಿ ಅದ್ಭತವನ್ನು ಸೃಷ್ಟಿಸಿದ ರಾಜಸ್ಥಾನ್ ತಂಡದ ವೇಗದ ಬೌಲರ್ ಕುಲ್ ದೀಪ್ ಸೆನ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ಕೊನೆಯ ಓವರ್‌ನಲ್ಲಿ ಲಕ್ನೋ ಗೆಲುವಿಗೆ 15 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್ ಬೌಲ್ ಮಾಡಿದ ರಾಜಸ್ಥಾನದ ಬೌಲರ್ ಕುಲದೀಪ್ ಸೇನ್, ಸ್ಟೋನ್ಸ್ ಗೆ ಕಡಿವಾಣ ಹಾಕಿದ್ರು.
ಕುಲದೀಪ್ ಎಸೆದ ಮೊದಲ ಎಸೆತಕ್ಕೆ ಅವೇಶ್ ಖಾನ್ ಒಂದು ರನ್ ಕದ್ದರು. ನಂತರದ ಮೂರು ಎಸೆತಗಳಲ್ಲಿ ಸ್ಟೊಯಿನಿಸ್ ರನ್ ಗಳಿಸಲು ವಿಫಲರಾದರು.
ಪರಿಣಾಮ ಲಖನೌ ಗೆಲುವಿನ 2 ಎಸೆತಗಳಲ್ಲಿ 14ರನ್ ಬೇಕಾಯಿತು. ಸ್ಟೋಯ್ನಿಸ್ ಐದನೇ ಎಸೆತಕ್ಕೆ ಬೌಂಡರಿ… ಕೊನೆಯ ಎಸೆತಕ್ಕೆ ಸಿಕ್ಸ್ ಸಿಡಿಸಿದ್ರೂ ಮೂರು ರನ್ ಗಳ ಅಂತರದೊಂದಿಗೆ ಪಂದ್ಯ ಸೋಲಬೇಕಾಯ್ತು.
ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗರು ಕುಲ್ ದೀಪ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಕುಲ್ ದೀಪ್ ಸೆನ್ ಅದ್ಭುತ ಪ್ರತಿಭೆಯಾಗಿದ್ದಾರೆ.
ಅವರು ಶೀಘ್ರದಲ್ಲಿಯೇ ಟೀಂ ಇಂಡಿಯಾದ ಪರ ಆಡಲಿದ್ದಾರೆ ಎಂದು ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಹೊಗಳಿದ್ದಾರೆ.
ರಾಜಸ್ಥಾನದ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ಕೂಡ ಕುಲದೀಪ್ ಅವರನ್ನು ಹೊಗಳಿಸಿದ್ದಾರೆ kuldeep-sen-playing-rr-now









