ಕುಮಾರಸ್ವಾಮಿ ಅವ್ರ ಜೆಡಿಎಸ್ ಜೋಕರ್ ತರಹ : ಸಿಪಿ ಯೋಗೇಶ್ವರ್ ವಾಗ್ದಾಳಿ
1 min read
ಕುಮಾರಸ್ವಾಮಿ ಅವ್ರ ಜೆಡಿಎಸ್ ಜೋಕರ್ ತರಹ : ಸಿಪಿ ಯೋಗೇಶ್ವರ್ ವಾಗ್ದಾಳಿ
ಮಂಗಳೂರು : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಗುರುವಾರ ಚನ್ನಪಟ್ಟಣದಲ್ಲಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಸಚಿವ ಸಿ.ಪಿ.ಯೋಗೇಶ್ವರ್ ಇದೀಗ ಮಂಗಳೂರಿನಲ್ಲಿ ಕುಮಾರಸ್ವಾಮಿ ಅವರ ಜೆಡಿಎಸ್ ಜೋಕರ್ ತರಹ ಅಂತಾ ಟೀಕೆ ಮಾಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ನೈತಿಕತೆ, ಸಿದ್ಧಾಂತ ಇಲ್ಲ.
ಅವ್ರ ಪಕ್ಷ ಜೋಕತ್ ರೀತಿ ಒಂದು ಬಾರಿ ಬಿಜೆಪಿ, ಇನ್ನೊಂದು ಬಾರಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಅವರು ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಅಂತಾ ಕಿಡಿಕಾರಿದ್ರು.
ಇನ್ನು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಉಡಾಫೆ, ಉದಾಸೀನ ಮಾಡುತ್ತಾ ಸಿಎಂ ಸ್ಥಾನದ ಗಾಂಭೀರ್ಯ ಬಿಟ್ಟು ಕಾಲ ಕಳೆದು ಬಿಟ್ಟರು. ಈಗ ಅವರು ಅಧಿಕಾರ ಕಳೆದುಕೊಂಡಿದ್ದಾರೆ.
ಅದರಲ್ಲೂ ಬಿಜೆಪಿ ಅಧಿಕಾರದಲ್ಲಿರುವುದು ಅವರಿಗೆ ಬಹಳ ಆತಂಕಕ್ಕೆ ಕಾರಣವಾಗಿದೆ. ಅಧಿಕಾರ ಇದ್ದಾಗ ಜನರ ಬಳಿ ಹೋಗದೇ ಇದ್ದವರು ಈಗ ದಿನ ಬೆಳಗ್ಗೆ ಎದ್ದು ಕ್ಷೇತ್ರಗಳ ಕಡೆಗೆ ಸಂಚಾರ ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದರು.
ಇದೇ ವೇಳೆ ಕುಮಾರಸ್ವಾಮಿ ಅವರಿಗೆ ಅಧಿಕಾರ ಇಲ್ಲದಿರುವಾಗ ಜನರ ಬಳಿಗೆ ಹೋಗಿ ಗೋಳಾಡೋದು, ಕಣ್ಣೀರು ಸುರಿಸುವುದು ಮೊದಲಿಂದ ಬಂದಿರುವಂತಹ ಗುಣ ಎಂದು ವ್ಯಂಗ್ಯವಾಡಿದ ಯೋಗೇಶ್ವರ್,
ಮುಂದಿನ 2023ರ ಚುನಾವಣೆಯಲ್ಲಿ ನೂರಕ್ಕೆ ನೂರು ಪ್ರತಿಶತ ಹಳೆ ಮೈಸೂರು ಕಡೆಗಳಲ್ಲಿ ಬಿಜೆಪಿ ಪಕ್ಷದ ಬಹುಪಾಲು ಶಾಸಕರು ಆಯ್ಕೆಯಾಗಿ ಬರುತ್ತಾರೆ. ಜೆಡಿಎಸ್ ಸಂಪೂರ್ಣ ನೆಲ ಕಚ್ಚಲಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.
