ರಾಮನಗರ : ಬಡವರ ಪರ ಇರುವ ಏಕೈಕ ನಾಯಕ ಎಂದರೆ ಅದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (Hd Kumaraswamy) ಮಾತ್ರ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
ಮೊಮ್ಮಗನ ಪರ ರಾಮನಗರ ಹಾಗೂ ಮಗನ ಪರ ಚನ್ನಪಟ್ಟಣ ತಾಲ್ಲೂಕಿನ ಇಗ್ಗಲೂರು ಗ್ರಾಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಚೆನ್ನಪಟ್ಟಣಕ್ಕೆ ಬರಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಮೇ 10ರಂದು ಕುಮಾರಸ್ವಾಮಿ ಗೆಲ್ಲಿಸಿ, ಮೇ 13ಕ್ಕೆ ಸಿಎಂ ಆಗುತ್ತಾರೆ. ಹೀಗಾಗಿ ಎಲ್ಲರೂ ಹೆಚ್.ಡಿ. ಕುಮಾರಸ್ವಾಮಿ ಪರ ಕೆಲಸ ಮಾಡಿ ಎಂದು ಹೇಳಿದರು.
ನಾನು ಹಿಂದೆಂದು ಬಿಸಿಲಿನಲ್ಲಿ ಇಷ್ಟೊಂದು ಜನ ಬಂದಿರುವುದನ್ನು ನೋಡಿರಲಿಲ್ಲ. ಕೈ ಜೋಡಿಸಿ ಮನವಿ ಮಾಡುತ್ತೇನೆ. ಕುಮಾರಸ್ವಾಮಿ ಮೇ 13 ಕ್ಕೆ ಸಿಎಂ ಆಗುತ್ತಾರೆ. ಅಂದು ರಾಜಗೋಪಾಲ್ ರೆಡ್ಡಿ ಶಾಸಕರಾಗಬೇಕು. ಯಾವ ಜಾತಿಗೂ ದ್ರೋಹ ಮಾಡಿಲ್ಲ. ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದೇವೆ. ಎಲ್ಲೂ ನಿಂತೂ ಮಾತಾಡಿಲ್ಲ. ಇಂದು ಮನಸ್ಸಿನ ಮೇಲೆ ಪ್ರೇರಣೆ ಆಗಿದೆ ಎಂದು ಹೇಳಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿ, ಮರಳವಾಡಿಯಲ್ಲಿ ಬೃಹತ್ ರೋಡ್ ಶೋ ನಡೆಯಿತು.