ರೆಸ್ಲಿಂಗ್ ಫೆಡರೇಶನ್ ಅಧ್ಯಯಕ್ಷ ಬ್ರಿಜ್ ಭೂಷಣ್ ವಿರುದ್ಧ ಎಫ್ಐಆರ್ ದಾಖಲಿಸದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲ್ಲೇರುವುದಾಗಿ ಅಗ್ರ ಕುಸ್ತಿಪಟುಗಳು ಬೆದರಿಕೆ ಹಾಕಿದ್ದಾರೆ. ದೇಶಾದ್ಯಂತ ಸಂಘಟನೆಗಳು ಪ್ರತಿಭಟನೆಯನ್ನು ಬೆಂಬಲಿಸುವಂತೆ ಸಂಘಟನೆಗಳಿಗೆ ಕರೆ ನೀಡಿದ್ದಾರೆ.
ಹೊಸದಿಲ್ಲಿಯ ಕುಸ್ತಿಪಟುಗಳು ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ.
ಮೇ 7ರಂದು ರೆಸ್ಲಿಂಗ್ ಫೆಡೆರೇಶನ್ ಚುನಾವಣೆ ನಡೆಸಲು ಕೇಂದ್ರ ಕ್ರೀಡಾ ಸಚಿವಾಲಯ ಸಿದ್ಧತೆ ನಡೆಸಿದೆ. ಚುನಾವಣೆಯಿಂದ ನಮಗೆ ಯಾವುದೇ ಪ್ರಯೋಜನೆ ಇಲ್ಲ . ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆ ಅಥ್ಲೀಟ್ಗಳ ಆರೋಪದ ಬಗ್ಗೆ ಸರಿಯಾದ ತನಿಖೆ ನಡೆಯಲಿದೆ ಎಂದು ಕುಸ್ತಿಪಟುಗಳು ಪಟ್ಟುಹಿಡಿದಿದ್ದಾರೆ.
ಮೂರು ತಿಂಗಳ ಹಿಂದೆ ಪ್ರತಿಭಟನೆಯನ್ನು ಹಿಂಪಡೆಯಬಾರದಿತ್ತು, ಕೆಲವು ಜನರು ಜಾಣತನದಿಂದ ನಮ್ಮ ಮನವೊಲಿಸಿದರು ಎಂದು ವಿನೀಶ್ ಪೋಗಟ್, ಭಜರಂಗ್ ಪುಣಿಯ ಮತ್ತು ಸಾಕ್ಷಿ ಮಲ್ಲಿಕ್ ದೂರಿದ್ದಾರೆ. ಪೊಲೀಸರು, ಎಫ್ಐಆರ್ ದಾಖಲಿಸಬೇಕು ನಾವು ಸ್ವಾತಂತ್ರ್ಯ ದೇಶದ ಪ್ರಜೆಗಳು, ನ್ಯಾಯ ಪಡೆಯಲು ಹಲವಾರು ಮಾರ್ಗಗಳಿವೆ. ನ್ಯಾಯ ಸಿಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕೊನ್ನಾಗ್ಟ್ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋದಾಗ ಅಲ್ಲಿನ ಸಿಬ್ಬಂದಿಗಳು ದೂರು ಸ್ವೀಕರಿಸಲು ನಿರಾಕರಿಸಿದರು ಎಂದು ಕುಸ್ತಿಪಟುಗಳು ದೂರಿದ್ದಾರೆ.
ಸಮಸ್ಯೆ ಇತ್ಯರ್ಥಕ್ಕೆ ಮುಂದಾದ ಇಂಡಿಯನ್ ಒಲಿಂಪಿಕ್ಸ್
ರೆಸ್ಲಿಂಗ್ ಫೆಡರೇಶನ್ ಬಿಕ್ಕಟ್ಟು ಪರಿಹರಿಸಲು ಗುರುವಾರ ಇಂಡಿಯನ್ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ) ಕಾರ್ಯ ನಿರ್ವಹಕರ ಸಭೆ ಕರೆದಿದ್ದು ಸಮಸ್ಯೆ ಬಗೆಹರಿಸಿ ಇತ್ಯರ್ಥ ಮಾಡುವುದಾಗಿ ಹೇಳಿದೆ. ಮೇ7ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಫೆಡರೇಶನ್ ಸಮಸ್ಯೆಯನ್ನು ಬಗೆಹರಿಸುವುದಾಗಿ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ. ಉಷಾ ಹೇಳಿದ್ದಾರೆ.