america pop singer lady gaga
ತಮ್ಮ ನಾಯಿಗಳನ್ನ ಹುಡುಕಿಕೊಟ್ಟವರಿಗೆ 3.6 ಕೋಟಿ ಬಹುಮಾನ ಘೋಷಿಸಿದ ಪಾಪ್ ಸಿಂಗರ್..!
ಅಮೆರಿಕಾ: ಅಮೇರಿಕಾದ ಪಾಪ್ ಸಿಂಗರ್ ಲೇಡಿ ಗಾಗಾರ 2 ಪ್ರೆಂಚ್ ತಳಿಯ ನಾಯಿಗಳು ಕಳವಾಗಿವೆ. ಈ ಹಿನ್ನೆಲೆ ತನ್ನ ಮುದ್ದಿನ ನಾಯಿಗಳನ್ನ ಹುಡುಕಿಕೊಟ್ಟವರಿಗೆ ಬರೋಬ್ಬರಿ 3.6 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ಕೊಡಲಾಗುವುದು ಎಂದು ಘೋಷಿಸಿದ್ದಾರೆ. ಗಾಗಾರ ಕೆಲಸಗಾರ ಬುಧವಾರ ರಾತ್ರಿ 3 ನಾಯಿಗಳನ್ನು ವಾಕಿಂಗ್ ಗೆ ಕರೆದುಕೊಂಡು ಹೋಗಿದ್ದರಂತೆ. ಆದ್ರೆ ಇದ್ದಕ್ಕಿದ್ದಂತೆ ಬಂದ ಆಗಂತುಕರು ಅವನ ಮೇಲೆ ಗುಂಡು ಹಾರಿಸಿ 2 ನಾಯಿಗಳನ್ನು ಕದ್ದುಕೊಂಡು ಹೋಗಿದ್ದಾರೆ. ಒಂದು ನಾಯಿ ತಪ್ಪಿಸಿಕೊಂಡು ಬಂದಿದೆ. ಈ ಘಟನೆಯಲ್ಲಿ ಮನೆ ಕೆಲಸದವನಿಗೂ ಗುಂಡು ತಾಕಿದ್ದು, ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ ಆತ ಚೇತರಿಸಿಕೊಂಡಿದ್ದಾನೆ ಎಂದು ಗಾಗಾ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ನಾಯಿಗಳ ಸುಳಿವು ಕೊಟ್ಟವರಿಗೆ ಸುಮಾರು 3.6 ಕೋಟಿ ಹಣ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಕೊರೊನಾ ಸಂಕಷ್ಟದ ನಡುವೆಯೂ ಜನಪ್ರತಿನಿಧಿಗಳ ಕಾರು ಖರೀದಿಗೆ 3 ಕೋಟಿ ರೂಪಾಯಿ ಬಿಡುಗಡೆ..!
america pop singer lady gaga