ಹೆರಿಗೆ ತಜ್ಞೆ ಶತಾಯುಷಿ ಲಕ್ಷ್ಮಿ ಅಜ್ಜಿ ವಳಾಲ್ ಇನ್ನಿಲ್ಲ
ಉಪ್ಪಿನಂಗಡಿ : ಲಕ್ಷ್ಮಿ ಅಜ್ಜಿ ವಳಾಲ್, ಶತಾಯುಷಿ ಅಜ್ಜಿ ಅಂತಲೇ ಎಲ್ಲರಿಗೂ ಪರಿಚಿತವಾಗಿದ್ದ ಲಕ್ಷ್ಮಿ ಸಪಲ್ದಿ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮಿ ಅಜ್ಜಿ, ತಮ್ಮ ಮಗನ ಮನೆಯಲ್ಲಿ ಉಸಿರು ನಿಲ್ಲಿಸಿದ್ದಾರೆ.
ವಳಾಲ್ ನಲ್ಲಿ ಲಕ್ಷ್ಮಿ ಅಜ್ಜಿ ಲಕ್ಕಿ ಅಜ್ಜಿ ಅಂತಲೇ ಚಿರಪರಿಚಿತರಾಗಿದ್ದರು. ಇವರು ಹೆರಿಗೆ ತಜ್ಞೆಯಾಗಿದ್ದು, ಸುಮಾರು ನೂರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ.
ಶತಾಯುಷಿ ಆದ ನಂತರವೂ ಚಟುವಟಿಕೆಯಿಂದ ಇದ್ದ ಅಜ್ಜಿ ಬಂದವರಿಗೆ ಆಶೀರ್ವದಿಸುತ್ತಾ,ಪ್ರೀತಿಯಿಂದ ಮಾತನಾಡಿಸುತ್ತಾ ಜನರ ಪ್ರೀತಿಗೆ ಪಾತ್ರವಾಗಿದ್ದರು.
ಐದು ತಲೆ ಮಾರುಗಳನ್ನು ಕಂಡ ಲಕ್ಷ್ಮಿ ಅಜ್ಜಿ ಮಕ್ಕಳಾದ ವೆಂಕಮ್ಮ, ಚೆನ್ನಮ್ಮ, ಮಗ ಕಾಂಟ್ರಾಕ್ಟರ್ ಬಿ ಕೆ ಆನಂದ, ನಿವೃತ್ತ ಕೆ ಪಿ ಸಿ ಉದ್ಯೋಗಿಯಾಗಿದ್ದ ರುಕ್ಮಯ್ಯ ಸಪಲ್ಯ, ಮೊಮ್ಮಕ್ಕಳು,ಮರಿಮಕ್ಕಳನ್ನು ಅಗಲಿದ್ದಾರೆ.