ನೇಪಾಳದ ಅಚಾಮ್ನಲ್ಲಿ ಭೂಕುಸಿತ: 13 ಸಾವು, 10 ಮಂದಿ ನಾಪತ್ತೆ, ಮುಂದುವರೆದ ಶೋಧ ಕಾರ್ಯಾಚರಣೆ
ದೂರದ ಪಶ್ಚಿಮ ನೇಪಾಳದ ಅಚಾಮ್ ಜಿಲ್ಲೆಯ ಹಲವಾರು ಭಾಗಗಳಲ್ಲಿ ಭೂಕುಸಿತ ಉಂಟಾಗಿ 13 ಜನರು ಸಾವನ್ನಪ್ಪಿದ್ದಾರೆ. ಮತ್ತು 10 ಮಂದಿ ಕಾಣೆಯಾಗಿದ್ದಾರೆ. ಇಲ್ಲಿಯವರೆಗೆ ಕನಿಷ್ಠ 10 ಜನರನ್ನು ರಕ್ಷಿಸಲಾಗಿದೆ.
ಡೆಪ್ಯುಟಿ ಚೀಫ್ ಡಿಸ್ಟ್ರಿಕ್ಟ್ ಆಫೀಸರ್ ದೀಪೇಶ್ ರಿಜಾಲ್ ಅವರ ಪ್ರಕಾರ, “ಕನಿಷ್ಠ 13 ಮಂದಿ ಸತ್ತರು, 10 ಮಂದಿ ಕಾಣೆಯಾಗಿದ್ದಾರೆ ಮತ್ತು 10 ಮಂದಿಯನ್ನು ದೂರದ ಪಶ್ಚಿಮ ನೇಪಾಳದ ಅಚಮ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂಕುಸಿತದಿಂದ ರಕ್ಷಿಸಲಾಗಿದೆ.” ಎಂದು ತಿಳಿಸಿದ್ದಾರೆ.
ದುರಂತದ ಹಿನ್ನೆಲೆಯಲ್ಲಿ ನೇಪಾಳದ ಗೃಹ ಸಚಿವರು ಆ ಪ್ರದೇಶದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್ಗಳನ್ನು ನಿಯೋಜಿಸಲು ಆದೇಶಿಸಿದ್ದಾರೆ.