ರಾಮನಗರ: ನಿಮ್ಮನ್ನು ನಂಬಿ ನಾನು ಮೂರನೇ ಬಾರಿಗೆ ಸ್ಪರ್ಧಿಸಿದ್ದೇನೆ. ನನ್ನನ್ನು ಕೈ ಬಿಡಬೇಡಿ ಎಂದು ಚನ್ನಪಟ್ಟಣ ಮತದಾರರಲ್ಲಿ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಕ್ಷೇತ್ರದ ಚಕ್ಕೆರೆ ಗ್ರಾಮದಲ್ಲಿ ಮತ ಪ್ರಚಾರದ ವೇಳೆ ಮಾತನಾಡಿದ ಅವರು, ಈಗಾಗಲೇ ನಾನು ಎರಡು ಬಾರಿ ಸೋತಿದ್ದೇನೆ. ಈ ಬಾರಿ ನಿಮ್ಮನ್ನು ನಂಬಿ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದೇನೆ. ನನ್ನನ್ನು ಕೈ ಬಿಡಬೇಡಿ ಎಂದು ಮನವಿ ಮಾಡಿದ್ದಾರೆ.
ನನ್ನನ್ನು ಸೋಲಿಸಲು ಸಿಎಂ, ಡಿಸಿಎಂ ಸೇರಿದಂತೆ ಇಡೀ ಸರ್ಕಾರವೇ ನಿಂತಿದೆ. ನನ್ನ ಎರಡು ಸೋಲು ಜನರು ಸೋಲಿಸಿದ್ದಲ್ಲ. ನಾನು ಶಾಸಕ ಆಗಬೇಕು ಅಂತ ಚುನಾವಣೆಗೆ ನಿಂತಿಲ್ಲ. ನನಗೆ ನನ್ನ ಜವಾಬ್ದಾರಿಯ ಅರಿವಿದೆ. ಕುತಂತ್ರದಿಂದ ಎರಡು ಚುನಾವಣೆ ಸೋತೆ. ಬಳಿಕ ನಾನು ಚುನಾವಣೆಗೆ ಸ್ಪರ್ಧೆ ಮಾಡೋದು ಬೇಡ ಅಂತ ನಿರ್ಧಾರ ಮಾಡಿದ್ದೆ. ಆದರೆ, ನಿಮ್ಮ ಒತ್ತಾಯದ ಮೇಲೆಯೇ ಮತ್ತೊಮ್ಮೆ ಸ್ಪರ್ಧಿಸಿದ್ದೇನೆ ಎಂದು ಹೇಳಿದ್ದಾರೆ.