ಲತಾ ಮಂಗೇಶ್ಕರ್ ಅಂತಿಮ ದರ್ಶನ ಪಡೆದ ಅಮಿತಾಬ್ ಬಚ್ಚನ್
ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ದೇಶಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದಾರೆ. ಲತಾ ಮಂಗೇಶ್ಕರ್ ಅವರ ಪಾರ್ಥೀವ ಶರೀರವನ್ನ ಅವರ ಮನೆ ಪ್ರಭಾಕುಂಜ್ ಸ್ಥಳಾಂತರಿಸಲಾಗಿದೆ. ಚಿತ್ರರಂಗದ ಹಲವು ಗಣ್ಯರು ಲತಾ ದೀದಿ ಅವರ ಕೊನೆಯ ದರ್ಶನಕ್ಕೆ ಆಗಮಿಸಿ ಗೌರವ ನಮನ ಸಲ್ಲಿಸುತ್ತಿದ್ದಾರೆ.
ನಟ ಅಮಿತಾಬ್ ಬಚ್ಚನ್, ಅವರ ಮಗಳು ಶ್ವೇತಾ ಅವರೊಂದಿಗೆ ಆಗಮಿಸಿ ಲತಾ ಮಂಗೇಶ್ಕರ್ ಅವರ ಅಂತಿಮ ದರ್ಶನ ಪಡೆದರು. ಲತಾ ಮಂಗೇಶ್ಕರ್ ಅವರ ನಿವಾಸದ ಹೊರಗಡೆ ಕಾಣಿಸಿಕೊಂಡಿದ್ದಾರೆ. Lata Mangeshkar : Amitabh Bachchan, Shraddha Kapoor visit the singer’s home.
ಎ ಆರ್ ರೆಹಮಾನ್ ಅವರು ಟ್ವಿಟರ್ ನಲ್ಲಿ ಲತಾ ಮಂಗೇಶ್ಕರ್ ಅವರ ಸಾವಿಗೆ ಕಂಬನಿ ಮಿಡಿದಿದ್ದು. ಇದು ನಮಗೆ ಅಂತ್ಯಂತ ದುಃಖದ ದಿನ ಲತಾ ಜಿ ಕೇವಲ ಐಕಾನ್ ಅಷ್ಟೇ ಅಲ್ಲ ಅವರು ಭಾರತೀಯ ಸಂಗೀತ ಮತ್ತು ಕಾವ್ಯ ಈ ಶೂನ್ಯ ಶಾಶ್ವತವಾಗಿ ಉಳಿಯುತ್ತದೆ. ಅವರಿಂದಿಗೆ ಹಲವು ಹಾಡುಗಳನ್ನ ಹಾಡಲು ನಾನು ಅದೃಷ್ಟ ಪಡೆದಿದ್ದೇನೆ ಎಂದು. ಅವರ ಮುಖ ಚಿತ್ರವನ್ನ ನೋಡಿ ನಾನು ಸ್ಪೂರ್ತಿ ಪಡೆಯುತ್ತಿದ್ದೇ ಎಂದು ಟ್ವೀಟ್ ಮಾಡಿದ್ದಾರೆ.