ದೇಶದಲ್ಲಿ ಈದ್ ಸಂಭ್ರಮ ಮನೆ ಮಾಡಿದೆ. ಸೆಲೆಬ್ರಿಟಿಗಳು ಕೂಡ ಈದ್ ಹಬ್ಬದಲ್ಲಿ ಮಿಂದೆದಿದ್ದಾರೆ. ಆದರೆ, ಹಬ್ಬದ ಹಿನ್ನೆಲೆಯಲ್ಲಿ ನಟ ಸಲ್ಮಾನ್ ಮನೆ ಎದುರು ಹೋದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಪ್ರತಿ ವರ್ಷ ಜನ್ಮದಿನ ಹಾಗೂ ಈದ್ ಪ್ರಯುಕ್ತ ಸಲ್ಮಾನ್ ಖಾನ್ ಸೇರಿದಂತೆ ನಟರು ಬಾಲ್ಕನಿಗೆ ಬಂದು ಅಭಿಮಾನಿಗಳಿಗೆ ಶುಭಾಶಯ ತಿಳಿಸುತ್ತಾರೆ. ಹೀಗಾಗಿ ಅವರನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುತ್ತಾರೆ. ಈ ವರ್ಷ ಕೂಡ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಆಗಮಿಸಿದ್ದರು.
ಮುಂಬೈನ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಎದುರು ಸಲ್ಮಾನ್ ಖಾನ್ ಅಭಿಮಾನಿಗಳು ಜಮಾಯಿಸಿದ್ದರು. ಆದರೆ, ಸಲ್ಮಾನ್ ಖಾನ್ ಬೇಗ ಹೊರಗೆ ಬರಲಿಲ್ಲ. ಹೀಗಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ಕಾಲ್ತುಳಿತ ಉಂಟಾಗಿದೆ. ಮಹಿಳೆಯರಿಗೆ ಪೆಟ್ಟು ಬಿದ್ದಿವೆ ಎನ್ನಲಾಗಿದೆ. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.