Layoff : ನೂರಾರು ಉದ್ಯೋಗಿಳನ್ನ ವಜಾಗೊಳಿಸಲು ಮುಂದಾದ ಪೆಪ್ಸಿಕೋ ಕಂಪನಿ…
ಟ್ವಿಟರ್, ಅಮೆಜಾನ್, ಫೇಸ್ಬುಕ್ ನಂತರ ಇದೀಗ ಪೆಪ್ಸಿಕೋ ತನ್ನ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯಲು ಮುಂದಾಗಿದೆದಿ ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಪೆಪ್ಸಿಕೋ ಇಂಕ್ ತನ್ನ ನ್ಯೂಯಾರ್ಕ್ ಕೇಂದ್ರ ಕಚೇರಿಯ ಪಾನೀಯ ಘಟಕಗಳಿಂದ 100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ತೀರ್ಮಾನಿಸಿದೆ.
ಸಂಸ್ಥೆಯನ್ನು ಸರಳಗೊಳಿಸುವ ಉದ್ದೇಶದಿಂದ ಕಂಪನಿ ಈ ನಿರ್ಧಾರ ಕೈಗೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಪೆಪ್ಸಿಕೋ ವಕ್ತಾರರು ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಉದ್ಯೋಗಿಗಳಿಗೆ ಕಳುಹಿಸಲಾಗಿರುವ ನೆನಪಿನ ಪತ್ರದಲ್ಲಿ “ ಸಂಸ್ಥೆಯನ್ನ ಸರಳಗೊಳಿಸುವ ಉದ್ದೇಶದಿಂದ ನಾವು ಪರಿಣಾಮಕಾರಿಯಾಗಿ ತೀರ್ಮಾನ ತೆಗದುಕೊಳ್ಳಬಹುದು ಎಂದು ಜರ್ನಲ್ ತಿಳಿಸಿದೆ.
ಅನಿಶ್ಚಿತ ಆರ್ಥಿಕ ವಾತಾವರಣ ಮತ್ತು ನಿರಂತರದ ಹಣದುಬ್ಬರದ ಪರಿಣಾಮ ವಿವಿಧ ಕೈಗಾರಿಕೆಗಳ ಕಂಪನಿಗಳನ್ನ ಅಸ್ಥಿರಗೊಳಿಸಿದೆ. ಹಾಗಾಗಿ ವೆಚ್ಚ ಕಡಿತಗೊಳಿಸಲು ಕಂಪನಿ ಕೆಲಸಗಾರರ ವಜಾಗೆ ಮುಂದಾಗುತ್ತಿದೆ. Amazon.com Inc., Apple Inc. ಮತ್ತು ಮೆಟಾ ಪ್ಲಾಟ್ಫಾರ್ಮ್ಸ್ ಇಂಕ್ ನಂತಹ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ.
Layoff: PepsiCo company plans to lay off hundreds of employees…