ವಿಧಾನಪರಿಷತ್‌ಗೆ ಜೂನ್ 13 ರಂದು ಚುನಾವಣೆ ನಡೆಯಲಿದ್ದು, ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈಗಾಗಲೇ ಕಾಂಗ್ರೆಸ್ ತನ್ನ ಪಟ್ಟಿ ಬಿಡುಗಡೆ ಮಾಡಿದ್ದು, ಬಿಜೆಪಿ ಕೂಡ ರಿಲೀಸ್ ಮಾಡಿದೆ.
ಈ ಬಾರಿ ಒಕ್ಕಲಿಗ ಕೋಟಾದಡಿ ಸಿ.ಟಿ.ರವಿಗೆ ಬಿಜೆಪಿ ಅವಕಾಶ ನೀಡಿದೆ. ಈ ನಿಟ್ಟಿನಲ್ಲಿ ನಾಳೆ ಸಿ.ಟಿ.ರವಿ ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಸಿ.ಟಿ.ರವಿಗೆ ಹೈಕಮಾಂಡ್ ನಾಯಕರು ಮಣೆ ಹಾಕಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸಿ.ಟಿ.ರವಿ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಆನಂತರ ಬಿಜೆಪಿ ಹೈಕಮಾಂಡ್, ಸಿ.ಟಿ. ರವಿಗೆ ನೀಡಿದ್ದ ಸಂಘಟನಾತ್ಮಕ ಜವಾಬ್ದಾರಿಯಿಂದಲೂ ನಿಯುಕ್ತಿಗೊಳಿಸಿತ್ತು. ಈಗ ಮತ್ತೊಮ್ಮೆ ವಿಧಾನ ಪರಿಷತ್ ಗೆ ಅವಕಾಶ ನೀಡಿದೆ. ಕೋಟಾ ಶ್ರೀನಿವಾಸಪೂಜಾರಿ ಅವರಿಂದ ತೆರವಾಗಲಿರುವ ವಿಪಕ್ಷ ನಾಯಕನ ಸ್ಥಾನ ನೀಡಲು ಕೂಡ ಬಿಜೆಪಿ ಮುಂದಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.