Nikhil Kumaraswamy: ಸಂಸದರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ: ನಿಖಿಲ್ ಕುಮಾರಸ್ವಾಮಿ

1 min read
Nikhil Kumarswamy Saaksha Tv

ಸಂಸದರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ: ನಿಖಿಲ್ ಕುಮಾರಸ್ವಾಮಿ

ಮಂಡ್ಯ: ಬೇರೆಯವರನ್ನೂ ದೂರುವ ಬದಲು ಸಂಸದರು ತಮ್ಮನ್ನು ತಾವು ಮೊದಲು ಆತ್ಮಾವಲೋಕನ ಮಡಿಕೊಳ್ಳಲಿ, ಸಂಸದರಾಗಿ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಪ್ರಶ್ನೆ ಮಾಡಿಕೊಳ್ಳಲಿ ಎಂದು ಸಂಸದೆ ಸುಮಲಾತಾ ಅಂಬರೀಶ್ ಅವರಿಗೆ ನಟ ನಿಖಿಲ್ ಕುಮಾರಸ್ವಾಮಿ ಕಾಲೆಳೆದರು.

ಮಂಡ್ಯ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾರೋ ಏನೋ ಅಂದ್ದಿದ್ದಾರೆ ಅಂತ ಅನುಕಂಪ ಗಿಟ್ಟಿಸುವುದು ಯಾವಾಗಲೂ ನಡೆಯಲ್ಲ. ಮಂಡ್ಯದ ಶಾಸಕರು ಎರಡು ಮೂರು ಬಾರಿ ಆಯ್ಕೆ ಆಗಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಅಲ್ಲದೇ ಅಭಿವೃದ್ಧಿ ಆಗಿಲ್ಲ ಅಂದರೆ, ಶಾಸಕರನ್ನ ಜನರು ಪ್ರಶ್ನೆ ಮಾಡುತ್ತಾರೆ. ಇವರನ್ನ ಪ್ರಶ್ನೆ ಮಾಡೋರು ಯಾರು..?, ಪ್ರತಿ ಬಾರಿ ಕಾಲು ಕೆರೆದುಕೊಂಡು ಜಗಳ ಹುಟ್ಟುಹಾಕಿ. ಯಾರೋ ಏನೋ ಅಂದರು, ಯಾರೋ ಏನೋ ಅಂದರು ಅಂತ ಅನುಕಂಪ ಗಿಟ್ಟಿಸಲು ಆಗಲ್ಲ. 2024ರ ವರೆಗೂ ಅವರ ಅಧಿಕಾರ ಇದೆ. ಜನಗಳ ಜೊತೆ ನಿಂತು ಕೆಲಸ ಮಾಡಲಿ ಎಂದು ಗುಡುಗಿದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd