ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಅರ್ಜಿ – ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ….
ಸಲಿಂಗಕಾಮಿ ದಂಪತಿಗಳನ್ನ ವಿಶೇಷ ವಿವಾಹ ಕಾನೂನಿಯಡಿಯಲ್ಲು ಗುರುತಿಸಬೇಕು ಎಂಬ ಅರ್ಜಿ ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಮತ್ತು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ “ಘಟನೆಗೆ ಸಂಬಂಧಿಸಿದಂತೆ ನೋಟಿಸ್ ಅನ್ನು ನಾಲ್ಕು ವಾರಗಳಲ್ಲಿ ಹಿಂತಿರುಗಿಸಬಹುದು. ಕೇಂದ್ರದ ನಿರ್ಧಾರಕ್ಕೆ ಸ್ವಾತಂತ್ರ್ಯ ನೀಡಲಾಗಿದೆ. ಭಾರತದ ಅಟಾರ್ನಿ ಜನರಲ್ಗೂ ನೋಟಿಸ್ ನೀಡಲಾಗುವುದು” ಎಂದು ಪೀಠ ಹೇಳಿದೆ.
ಹೈದರಾಬಾದ್ನಲ್ಲಿ ವಾಸಿಸುತ್ತಿರುವ ಸಲಿಂಗಕಾಮಿ ದಂಪತಿ ಸುಪ್ರಿಯೋ ಚಕ್ರವರ್ತಿ ಮತ್ತು ಅಭಯ್ ಡ್ಯಾಂಗ್ ಮೊದಲ ಮನವಿ ಸಲ್ಲಿಸಿದ್ದರೆ, ಎರಡನೇ ಮನವಿಯನ್ನು ಸಲಿಂಗಕಾಮಿ ದಂಪತಿಗಳಾದ ಪಾರ್ಥ್ ಫಿರೋಜ್ ಮೆಹ್ರೋತ್ರಾ ಮತ್ತು ಉದಯ್ ರಾಜ್ ಸಲ್ಲಿಸಿದ್ದಾರೆ. ವಿಶೇಷ ವಿವಾಹ ಕಾಯ್ದೆಯಡಿ ವಿವಾಹವನ್ನ ಗುರುತಿಸುವಂತೆ ಮನವಿ ಸಲ್ಲಿಸಿದ್ದಾರೆ.
ಇಷ್ಟವಾದ ವ್ಯಕ್ತಿಯನ್ನ ಮದುವೆಯಾಗುವ ಹಕ್ಕನ್ನ LGBTQ ಗೆ ಸೇರಿದ ವ್ಯಕ್ತಿಗಳಿಗೆ ವಿಸ್ತರಿಸುವಂತೆ ನಿರ್ದೇಶನ ನಿಡುವಂತೆ ಮನವಿ ಸಲ್ಲಿಸಿದ್ದರು. ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡದಿರುವುದು ಸಂವಿಧಾನದ 14 ಮತ್ತು 21 ನೇ ವಿಧಿಯಡಿಯಲ್ಲಿ ಸಮಾನತೆ ಮತ್ತು ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
LGBTQ : SC seeks response of Centre on pleas seeking recognition of same-sex marriage