ಅಮಿತ್ ಶಾ , ಯೋಗಿ ಆದಿತ್ಯನಾಥ್ ಗೆ ಕೊಲೆ ಬೆದರಿಕೆ..! ಪ್ರಮುಖ ಸ್ಥಳಗಳ ಮೇಲೆ ದಾಳಿ ಮಾಡುವ ಧಮ್ಕಿ..!
ನವದೆಹಲಿ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊಲೆ ಬೆದರಿಕೆಯೊಂದು ಬಂದೆ. ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಕೊಲೆ ಮಾಡುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಈ ಸುದ್ದಿ ಸದ್ಯ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದೆ.
ಈ ಇ-ಮೇಲ್ ಅನ್ನು ಕೂಡಲೇ ಮುಂಬೈನ ಕೇಂದ್ರ ಮೀಸಲು ಪೊಲಿಸ್ ಪಡೆಗೆ ಕಳುಹಿಸಲಾಗಿದೆ. ಇಮೇಲ್ ನಲ್ಲಿ ಪೂಜಾ ಸ್ಥಳಗಳು ಹಾಗೂ ಪ್ರಮುಖ ಸ್ಥಳಗಳ ಮೇಲೆ ದಾಳಿ ಮಾಡುವುದಾಗಿಯೂ ತಿಳಿಸಲಾಗಿದ್ದು, ಆತಂಕ ಸೃಷ್ಟಿ ಮಾಡಿದೆ. ಅಲ್ಲದೆ ನಮ್ಮಲ್ಲಿ 11 ಆತ್ಮಹತ್ಯಾ ಬಾಂಬರ್ ಗಳಿದ್ದಾರೆ. ಯೋಗಿ ಆದಿತ್ಯನಾಥ್ ಹಾಗೂ ಅಮಿತ್ ಶಾ ಅವರನ್ನು ಕೊಲೆ ಮಾಡುವುದೇ ನಮ್ಮ ಗುರಿ ಎಂದು ಧಮ್ಕಿ ಹಾಕಲಾಗಿದೆ.
ಇನ್ಮುಂದೆ ಆಧಾರ್ ಕಾರ್ಡ್ ಪಡೆಯುವುದು ತುಂಬಾನೆ ಸುಲಭ ಹೇಗಂತೀರಾ…!
ದೇಶದಲ್ಲಿ ಕೊರೊನಾ 2ನೇ ಅಲೆ – ಒಂದೇ ದಿನ 1.15 ಲಕ್ಷ ಕೇಸ್ ಗಳು ಪತ್ತೆ – ಬಲಿಯಾದವರೆಷ್ಟು..?