ಮಿಜೋರಾಂನಲ್ಲಿ 3.5 ತೀವ್ರತೆಯ ಲಘು ಭೂಕಂಪ ಸಂಭವಿಸಿದ್ದು, ಆತಂಕ ಮನೆ ಮಾಡಿದೆ.
ಅಲ್ಲಿಯ ಲುಂಗ್ಲೈನಲ್ಲಿ ಬೆಳಿಗ್ಗೆ 7.18ರ ಹೊತ್ತಿಗೆ ಕಂಪನ ಸಂಭವಿಸಿದೆ. ಪಕ್ಕದ ರಾಷ್ಟ್ರ ಜಪಾನ್ನಲ್ಲಿ ಕಳೆದ ಒಂದು ವಾರದ ಹಿಂದೆ 155 ಕಂಪನಗಳು ಒಂದೇ ದಿನದಲ್ಲಿ ಸಂಭವಿಸಿ, ಸಾಕಷ್ಟು ಸಾವು- ನೋವು ಸಂಭವಿಸಿದ್ದವು.
ಅಲ್ಲಿ 62ಕ್ಕೂ ಅಧಿಕ ಜನರು ಸಾವನ್ನಪ್ಪಿ, 240ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಹೊನ್ಶುವಿನ ಮುಖ್ಯ ದ್ವೀಪದಲ್ಲಿರುವ ಇಶಿಕಾವಾ ಪ್ರಾಂತ್ಯದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಕಟ್ಟಡಗಳು ಉರುಳಿದ್ದವು, ರಸ್ತೆಗಳು ಬಿರುಕುಬಿಟ್ಟವು. ದೇಶದಲ್ಲಿ ಕೂಡ ಭೂಕಂಪ ಸಂಭವಿಸುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.








