ಮೇ 1 2021 ರಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೋವಿಡ್-19 ವ್ಯಾಕ್ಸಿನೇಷನ್ ನೀಡುವ ರಾಜ್ಯಗಳ ಪಟ್ಟಿ

1 min read
free COVID-19 vaccination

ಮೇ 1 2021 ರಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೋವಿಡ್-19 ವ್ಯಾಕ್ಸಿನೇಷನ್ ನೀಡುವ ರಾಜ್ಯಗಳ ಪಟ್ಟಿ

ದೇಶದಲ್ಲಿ ಮೇ 1, 2021 ರಿಂದ 3ನೇ ಹಂತದ ವ್ಯಾಕ್ಸಿನೇಷನ್‌ ಡ್ರೈವ್ ಪ್ರಾರಂಭವಾಗಲಿದ್ದು, ಎಲ್ಲರಿಗೂ ಉಚಿತ ಕೋವಿಡ್-19 ಲಸಿಕೆಗಳನ್ನು ನೀಡುವುದಾಗಿ ಹಲವಾರು ರಾಜ್ಯಗಳು ಘೋಷಿಸಿವೆ.

ಉಚಿತ ಕೋವಿಡ್-19 ವ್ಯಾಕ್ಸಿನೇಷನ್ ನೀಡುವ ರಾಜ್ಯಗಳ ಪಟ್ಟಿ ಹೀಗಿದೆ:

1. ಉತ್ತರ ಪ್ರದೇಶ

ಅರ್ಹ ಎಲ್ಲಾ ಫಲಾನುಭವಿಗಳಿಗೆ ಮೇ 1 ರಿಂದ ಉಚಿತವಾಗಿ ಲಸಿಕೆ ನೀಡಲು ರಾಜ್ಯ ನಿರ್ಧರಿಸಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 2021 ರ ಏಪ್ರಿಲ್ 20 ರಂದು ಘೋಷಿಸಿದ್ದಾರೆ. ಸಿಎಂ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವರ ಪರಿಷತ್ತಿನ ಸಭೆಯ ನಂತರ ಈ ಹೇಳಿಕೆ ಬಂದಿದೆ. ತನ್ನದೇ ಆದ ಮೂಲಗಳನ್ನು ಬಳಸಿಕೊಂಡು ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಮುಂದುವರಿಸಲು ರಾಜ್ಯ ಸರ್ಕಾರ ಯೋಜಿಸಿದೆ.
Covid19 vaccination drive

2. ಅಸ್ಸಾಂ

18 ರಿಂದ 45 ವರ್ಷದೊಳಗಿನ ಎಲ್ಲರಿಗೂ ಉಚಿತ ಲಸಿಕೆಗಳನ್ನು ನೀಡಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ರಾಜ್ಯ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ, ಕೇಂದ್ರವು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆಗಳನ್ನು ನೀಡುತ್ತಿದೆ. ಆದರೆ ರಾಜ್ಯ ಸರ್ಕಾರವು ‌18 ರಿಂದ 45 ವರ್ಷದೊಳಗಿನವರಿಗೆ ಉಚಿತ ಲಸಿಕೆ ನೀಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

3. ಮಧ್ಯಪ್ರದೇಶ

ಸಿಎಂ ಶಿವರಾಜ್ ಚೌಹಾನ್ ಅವರು ಕ್ಯಾಬಿನೆಟ್ ಸಭೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವಯಸ್ಕರಿಗೆ ಮೇ 1 ರಿಂದ ರಾಜ್ಯದಲ್ಲಿ ಉಚಿತ ಕೋವಿಡ್-19 ಲಸಿಕೆ ನೀಡಲಾಗುವುದು ಎಂದು ಘೋಷಿಸಲು ನಿರ್ಧರಿಸಿದ್ದಾರೆ.

4. ಛತ್ತೀಸ್‌ಗಢ

ಚುಚ್ಚುಮದ್ದಿನ ವೆಚ್ಚವನ್ನು ರಾಜ್ಯವು ಭರಿಸಲಿದೆ ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಟ್ವೀಟ್ ಮಾಡಿದ್ದಾರೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ರಾಜ್ಯಕ್ಕೆ ಲಭ್ಯವಾಗುವಂತೆ ಕೇಂದ್ರವನ್ನು ಒತ್ತಾಯಿಸಿದ್ದಾರೆ.

5. ಸಿಕ್ಕಿಂ

ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು 18 ರಿಂದ 45 ವರ್ಷದೊಳಗಿನ ಎಲ್ಲಾ ನಾಗರಿಕರಿಗೆ ಏಪ್ರಿಲ್ 21, 2021 ರಿಂದ ಉಚಿತ ಕೋವಿಡ್-19 ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ.

6. ಬಿಹಾರ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆಯನ್ನು ಘೋಷಿಸಿದ್ದಾರೆ.

7. ಗೋವಾ

18-45 ವರ್ಷದೊಳಗಿನ ಎಲ್ಲರಿಗೂ ಲಸಿಕೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

8. ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇ1 ರಿಂದ ಉಚಿತ ವ್ಯಾಕ್ಸಿನೇಷನ್ ನೀಡುವುದಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ಘೋಷಿಸಿದ್ದಾರೆ.

9. ತಮಿಳುನಾಡು

2021 ರ ಮೇ 1 ರಿಂದ ತಮಿಳುನಾಡು ರಾಜ್ಯ ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆಗಳನ್ನು ನೀಡುವುದಾಗಿ ಘೋಷಿಸಿದೆ. 18 – 45 ವರ್ಷ ವಯಸ್ಸಿನವರಿಗೆ ಆದ್ಯತೆಯ ಆಧಾರದ ಮೇಲೆ ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಮಾರುಕಟ್ಟೆ ಕಾರ್ಮಿಕರು, ಸಾರಿಗೆ ಸಿಬ್ಬಂದಿ, ಸರ್ಕಾರಿ ಸಿಬ್ಬಂದಿ, ಚಿಲ್ಲರೆ ಮಾರಾಟ ಮಳಿಗೆಗಳ ಮಾಲೀಕರಿಗೆ, ಆಟೋ ಚಾಲಕರು, ಕಾಲೇಜು ಮತ್ತು ಶಾಲಾ ಬೋಧನಾ ಸಿಬ್ಬಂದಿಗೆ ವಿಶೇಷ ಲಸಿಕೆ ಶಿಬಿರಗಳನ್ನು ರಾಜ್ಯ ಸರ್ಕಾರ ಸ್ಥಾಪಿಸಲಿದೆ.
Vaccination phase

10. ಆಂಧ್ರಪ್ರದೇಶ

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಮೇ 1 ರಿಂದ 18-45 ವರ್ಷ ವಯಸ್ಸಿನವರಿಗೆ ಉಚಿತ ಕೋವಿಡ್-19 ಲಸಿಕೆಗಳನ್ನು ಘೋಷಿಸಿದ್ದಾರೆ.

11. ಜಾರ್ಖಂಡ್

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಏಪ್ರಿಲ್ 22, 2021 ರಂದು ಕೋವಿಡ್-19 ಲಸಿಕೆಯನ್ನು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೆ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ.

12. ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶ ಸರ್ಕಾರವು ಮೇ 1 ರಿಂದ 18 – 45 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆ ಉಚಿತವಾಗಿ ನೀಡುವುದಾಗಿ ಘೋಷಿಸಿದೆ.

#States #free #COVID19 #vaccination

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd