ಪ್ರೀತಿ ಮಾಡಿದ್ದೆ ತಪ್ಪಾಯ್ತಾ? | ಕೊಲೆಯಾದ ಲೈಟ್ ಬಾಯ್
ಚಾಮರಾಜನಗರ: ಪ್ರೇಮ ವಿಚಾರಕ್ಕೆ ಯುವಕನೋರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗುಂಡ್ಲುಪೇಟೆಯ ಹೊಸೂರು ಬಡಾವಣೆಯಲ್ಲಿ ನಡೆದಿದೆ.
ಲೈಟ್ ಬಾಯ್ ಚಿಕ್ಕರಾಜು(30) ಕೊಲೆಯಾದ ದುರ್ದೈವಿ. ಬೆಂಗಳೂರಿನಲ್ಲಿ ಲೈಟ್ ಬಾಯ್ ಆಗಿದ್ದ ಚಿಕ್ಕರಾಜು ಹಬ್ಬಕ್ಕೆಂದು ಊರಿಗೆ ಬಂದಾಗ ಘಟನೆ ಸಂಭವಿಸಿದೆ. ಪ್ರವೇಮ ವಿಚಾರಕ್ಕೆ ಗಲಾಟೆ ಸಂಭವಿಸಿದ್ದು ಗಲಾಟೆ ವಿಕೋಪಕ್ಕೆ ತಿರುಗಿ ಯುವಕ ಕೊಲೆಯಾಗಿದ್ದಾನೆ.
ಚಿಕ್ಕರಾಜು ಗುಂಡ್ಲುಪೇಟೆಯ ಹೊಸೂರು ಬಡಾವಣೆಯಲ್ಲಿದ್ದ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಈ ವಿಚಾರ ಯುವತಿಯ ಸಂಬಂಧಿಕರಿಗೆ ತಿಳಿದಿದ್ದು, ಇದನ್ನು ವಿರೋಧಿಸಿ ಚಿಕ್ಕರಾಜುನನ್ನು ಪ್ರಶ್ನಿಸಿದ್ದಾರೆ. ಆದರೆ ಚಿಕ್ಕರಾಜು ಇದನ್ನು ವಿರೋಧಿಸಿದ್ದಾನೆ.
ಪರಿಣಾಮ ವೀರಭದ್ರನಾಯ್ಕ, ಯುವತಿ ತಂದೆ ಮಹದೇವನಾಯ್ಕ, ಸಹೋದರರಾದ ಕಿರಣ್, ಅಭಿಷೇಕ್ ಆತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೃತ್ಯ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಪ್ರಸ್ತುತ ಈ ಪ್ರಕರಣ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.









