ಮಾರ್ಚ್ 22 ರಂದು ಐಪಿಎಲ್ ನ 17ನ ಆವೃತ್ತಿಗೆ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್ ಹಾಗೂ ಐದು ಬಾರಿ ವಿಜೆತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯದಲ್ಲಿ ಕಾದಾಡಲಿವೆ.
ಈ ಬಾರಿ ಐಪೆಲ್ 12 ಸ್ಥಳಗಳಲ್ಲಿ ನಡೆಯಲಿವೆ. 10 ಆಯಾ ಫ್ರಾಂಚೈಸಿಗಳ ಹೋಮ್ ಗ್ರೌಂಡ್‌ಗಳಾಗಿವೆ. ಐಪಿಎಲ್ ಪಂದ್ಯಗಳು ಎಂದಿನಂತೆ ಸಂಜೆ 7:30ಕ್ಕೆ ಆರಂಭವಾಗಲಿವೆ. ಡಬಲ್-ಹೆಡರ್‌ಗಳನ್ನು ಒಳಗೊಂಡಿರುವ ದಿನಗಳಲ್ಲಿ, ಮೊದಲ ಪಂದ್ಯವು ಮಧ್ಯಾಹ್ನ 3:30ಕ್ಕೆ ನಡೆಯಲಿವೆ. ಉದ್ಘಾಟನಾ ಪಂದ್ಯ ಮಾತ್ರ ರಾತ್ರಿ 8ಕ್ಕೆ ಆರಂಭವಾಗಲಿದೆ.
ಲೈವ್ ಸ್ಟ್ರೀಮಿಂಗ್ ಅನ್ನು ಭಾರತದ ವೀಕ್ಷಕರು ಜಿಯೋ ಸಿನಿಮಾದ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತ ಲೈವ್ ನಲ್ಲಿ ವೀಕ್ಷಿಸಬಹುದು. ಈ ಬಾರಿ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಲೈವ್ ಇರುವುದಿಲ್ಲ. ಅಲ್ಲದ, ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ನಲ್ಲಿ ಲೈವ್ ನೋಡಬಹುದು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ವರ್ಷದ ಉದ್ಘಾಟನಾ ಸಮಾರಂಭಕ್ಕೆ ‘ರೈಸ್ ಆಸ್ ಒನ್’ ಥೀಮ್ ಇಟ್ಟುಕೊಂಡಿದೆ. ಅಕ್ಷಯ್ ಕುಮಾರ್, ಎಆರ್ ರೆಹಮಾನ್, ಟೈಗರ್ ಶ್ರಾಫ್ ಮತ್ತು ಸೋನು ನಿಗಮ್ ಸೇರಿದಂತೆ ಹಲವು ತಾರೆಯರು ಆಗಮಿಸಲಿದ್ದಾರೆ.