ಕೋವಿಡ್ ಪಾಸಿಟಿವಿಟಿ ದರ ಶೇ 5ಕ್ಕೆ ಬಂದ್ರೆ ಅನ್ ಲಾಕ್ ಪಕ್ಕಾ lock-down
ಹುಬ್ಬಳ್ಳಿ : ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇಕಡಾ 5ಕ್ಕೆ ಬಂದರೇ ಅನ್ ಲಾಕ್ ಮಾಡುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಧಾರವಾಡ ಜಿಲ್ಲೆಯ ಕೋವಿಡ್ ನಿಯಂತ್ರಣ ಹಾಗೂ ಇತರ ಅಭಿವೃದ್ಧಿ ವಿಷಯಗಳ ಪರಿಶೀಲನೆ ಸಭೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.17.09 ರಷ್ಟಿದ್ದು, ಅದು ಶೇ.05 ಕ್ಕೆ ಬಂದರೆ ಅನ್ ಲಾಕ್ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದರು.
ಇನ್ನು ದೆಹಲಿಯಿಂದ ಈಗಾಗಲೇ ರಾಜ್ಯಕ್ಕೆ ಬ್ಲ್ಯಾಕ್ ಫಂಗಸ್ ಗೆ 9 ಸಾವಿರ ಅಂಪೋಟೆರಿಸನ್ ಬಿ ಔಷಧ ಬಂದಿದೆ.
ಅದನ್ನು ಎಲ್ಲರಿಗೂ ಕೊಡುವ ವ್ಯವಸ್ಥೆ ಮಾಡಲಾಗುವುದು. ಮೂರನೇ ಅಲೆ ಬಂದರೆ ಅದಕ್ಕೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಸಿದ್ಧತೆ ಬಗ್ಗೆ ಕೂಡಾ ಚರ್ಚೆ ಮಾಡಲಾಗಿದೆ ಎಂದರು.