ಬೆಂಗಳೂರು : ಲೋಕಾಯುಕ್ತರಿಂದ ಬಂಧನಕ್ಕೊಳಗಾಗಿರುವ ಕೆ.ಆರ್. ಪುರಂ ತಹಸೀಲ್ದಾರ್ (KR Puram Tahsildar) ಅಜಿತ್ ರೈ (Ajit Rai) ಮನೆಯಲ್ಲಿದ್ದ ವಾಚ್‌ಗಳನ್ನು (Watch) ನೋಡಿ ಲೋಕಾಯುಕ್ತ ಅಧಿಕಾರಿಗಳೇ (Lokayukta Officials) ಒಂದು ಕ್ಷಣ ಶಾಕ್ ಆಗಿದ್ದಾರೆ.
ಅಜಿತ್ ರೈ ಬಳಿ ಮೂರು Rado ವಾಚ್ ಪತ್ತೆಯಾಗಿದೆ. ಈ ಮೂರು ವಾಚ್ ಗಳ ಬೆಲೆ 5 ಲಕ್ಷ ರೂ.ಗೂ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ. ದಾಳಿ ವೇಳೆ ಸಿಕ್ಕ ಅಷ್ಟೂ ವಾಚ್ ಗಳ ಬೆಲೆ ಬರೋಬ್ಬರಿ ಹತ್ತು ಲಕ್ಷ ರೂ.ಗೂ ಅಧಿಕ ಎಂದು ಅಂದಾಜಿಸಲಾಗಿದೆ.
ಅಜಿತ್ ರೈ ಬ್ರಾಂಡ್ ಲೋಗೋ ಸೀಕ್ರೇಟ್ ರಿವೀಲ್ ಆಗಿದೆ. ASR ಹೆಸರಿನಲ್ಲಿ ಅಜಿತ್ ರೈ ಅಫಿಶಿಯಲ್ ಲೋಗೋ ತಯಾರು ಮಾಡಿದ್ದರು. ಎಎಸ್‌ಆರ್ ಎಂದರೆ ಅಜಿತ್ ಸೌಮ್ಯಾ ರೈ ತಮ್ಮ ಹೆಸರಿನೊಂದಿಗೆ ಪತ್ನಿ ಸೌಮ್ಯ ಹೆಸರನ್ನು ಸೇರಿದೆ ಲೋಗೋ ಮಾಡಿದ್ದಾರೆ.
ಬೈಕ್, ಕಾರು ಹಾಗೂ ಇನ್ನಿತರ ವಸ್ತುಗಳಿಗೆ ವಿಶೇಷವಾಗಿ ಅಜಿತ್ ರೈ ಲೋಗೋ ಡಿಸೈನ್ ಮಾಡಿ ಅಂಟಿಸುತ್ತಿದ್ದರು. ಆಡಿ, ಬೆನ್ಜ್ ಕಾರುಗಳ ಲೋಗೋ ಮಾದರಿಯಲ್ಲಿ ವಿನ್ಯಾಸ ಮಾಡಿದ್ದನ್ನು ನೋಡಿ ಲೋಕಾ ಅಧಿಕಾರಿಗಳು ಶಾಕ್ ಆಗಿದ್ದಾರೆ. ಅಜಿತ್ ರೈ ಅವರು, ಸಹಕಾರನಗರದಲ್ಲಿ 50 ಲಕ್ಷದ ಲೀಸ್‍ನ ಮನೆಯಲ್ಲಿ ವಾಸಿಸುತ್ತಿದ್ದರು. ಗೆಳೆಯ ಗೌರವ್ ಹೆಸರಲ್ಲಿ ದೇವನಹಳ್ಳಿ ಬಳಿ 96 ಎಕರೆಯ ರೇಸ್ ಕ್ಲಬ್, ಸಹೋದರ ಅಶೀತ್ ರೈ ಹೆಸರಲ್ಲಿ ಬೇನಾಮಿ ಆಸ್ತಿ, ದೇವನಹಳ್ಳಿಯಯಲ್ಲಿ 44 ಎಕರೆಯ ಫಾರ್ಮ್ ಹೌಸ್, ಸದ್ಯ ಇವರು ಮಾಡಿರುವ ಆಸ್ತಿ ನೂರು ಕೋಟಿ ರೂ. ಗೂ ಅಧಿಕವಾಗಿದೆ ಎನ್ನಲಾಗಿದೆ. ಬೆಲೆ ಬಾಳುವ ವಾಹನಗಳನ್ನು ಹೊಂದಿದ್ದಾರೆ.







