ತುಮಕೂರು : ಸಾಲಬಾಧೆ (Indebtedness) ತಾಳಲಾರದೆ ಒಂದೇ ಕುಟುಂಬದ ಮೂವರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಜಿಲ್ಲೆಯ ಪಂಡಿತನಹಳ್ಳಿಯ ರೈಲ್ವೆಗೇಟ್ ಹತ್ತಿರ ಬೆಳಕಿಗೆ ಬಂದಿದೆ.
ಸಿದ್ದಗಂಗಯ್ಯ (62), ಸುನಂದಮ್ಮ ಹಾಗೂ ಗೀತಾ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು ಎನ್ನಲಾಗಿದ್ದು, ಸಿದ್ದಗಂಗಯ್ಯ ಅವರು ಕೆಇಬಿಯಲ್ಲಿ (KEB) ಕೆಲಸ ಮಾಡಿ ನಿವೃತ್ತಿ ಪಡೆದಿದ್ದರು. ಆದರೆ, ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲ ಹೆಚ್ಚಾಗಿದ್ದರಿಂದಾಗಿ ಮಲ್ಲೇಶ್ವರಂನ ಹತ್ತಿರ ಇರುವ ಕೆಸಿ ಜನರಲ್ ಆಸ್ಪತ್ರೆ (KC General Hospital) ಹತ್ತಿರ ಟೀ ಶಾಪ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು.
ಆದರೆ, ಸಾಲದ ಬಾಧೆ ಹೆಚ್ಚಾಗಿದ್ದರಿಂದಾಗಿ ಮನನೊಂದು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿವೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ