ಕನ್ನಡ ಈ ಸಿನಿಮಾಗೆ ಫಿದಾ ಆಗಿದ್ದಾರೆ ಆಸ್ಟ್ರೇಲಿಯಾ ಪತ್ರಕರ್ತೆ..!
ಇತ್ತೀಚೆಗೆ ಕನ್ನಡ ಹಾಗೂ ಸೌತ್ ಸಿನಿಮಾಗಳು ಬಾಲಿವುಡ್ ಸಿನಿಮಾಗಳನ್ನ ಮೀರಿಸುತ್ತಿವೆ.. ವಿಶ್ವದ ಜನರ ಗಮನ ಸೆಲೆಯುತ್ತಿವೆ… ಅದಕ್ಕೆ ಉತ್ತಮ ಉದಾಹರತಣೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಸಿನಿಮಾ… ಇನ್ನೂ ಒಟಿಟಿಗಳ ಮೂಲಕ ರಿಲೀಸ್ ಆಗಿರುವ ಸಿನಿಮಾಗಳು ಸಿಕ್ಕಾಪಟ್ಟೆ ಹೈಪ್ ಪಡೆದುಕೊಳ್ತಿವೆ. ಅನೇಕ ಸಿನಿಮಾಗಳು ಒಟಿಟಿ ಮೂಲಕ ತೆರೆಕಂಡು ಮನಗೆದ್ದಿವೆ..
ಹಾಗೆಯೇ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಿ ಸಖತ್ ಹಿಟ್ ಆಗಿ ಅಪಾರ ಅಭಿಮಾನಿಗಳ ಸಂಪಾದಿಸಿದ ‘ಲವ್ ಮಾಕ್ಟೆಲ್’ ಸಿನಿಮಾಗೆ ಆಸ್ಟ್ರೇಲಿಯನ್ ಪತ್ರಕರ್ತೆ ಫಿದಾ ಆಗಿದ್ದಾರೆ.. ಈ ಸಿನಿಮಾ ಅಂತರಾಷ್ಟ್ರೀಯ ಮಟ್ಟದ ಪ್ರೇಕ್ಷಕರ ಗಮನ ಸೆಳೆದಿದೆ.. ಆಸ್ಟ್ರೇಲಿಯಾ ಪತ್ರಕರ್ತೆ ಕ್ಲೋಯಿ ಅಮಂಡಾ ಬೇಯ್ಲಿ ಎಂಬಾಕೆ ಲವ್ ಮಾಕ್ಟೆಲ್ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಲವ್ ಮಾಕ್ಟೆಲ್ ಸಿನಿಮಾದ ಬಗ್ಗೆ ಹೊಗಳಿ ಟ್ವಿಟ್ಟರ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಲವ್ ಮಾಕ್ಟೆಲ್’ ಅದ್ಭುತವಾದ ಸಿನಿಮಾ. ಸಿನಿಮಾ ನೋಡುವಾಗ ಸಾಕಷ್ಟು ಬಾರಿ ನಾನು ನಕ್ಕಿದ್ದೀನಿ. ಸಿನಿಮಾದ ಅಂತ್ಯದಲ್ಲಿ ದುಃಖಪಟ್ಟಿದ್ದೇನೆ. ಆದರೆ ಇದೊಂದು ಒಳ್ಳೆಯ ಅನುಭೂತಿ. ಸಂಗೀತ ಅದ್ಭುತವಾಗಿದೆ. ಸಿನಿಮಾದಲ್ಲಿ ತಮಾಷೆಯೂ ಇದೆ ಭಾವುಕತೆಯೂ ಇದೆ. ಸಿನಿಮಾ ನೋಡುವಾಗ ಎಲ್ಲ ರೀತಿಯ ಭಾವನೆಗಳನ್ನು ಅನುಭವಿಸಿದೆ’. 2ನೇ ಬಾಗವೂ ಬರಲಿದೆ ಎನ್ನಲಾಗ್ತಿದ್ದು, ಕಾಯುತ್ತಿದ್ದೇನೆ ಎಂದಿದ್ದಾರೆ.
ಅಷ್ಟೇ ಅಲ್ಲ ಲವ್ ಮಾಕ್ ಟೇಲ್ ರಿಲೀಸ್ ಆದಾಗಲೇ ಬಿಡುಗಡೆಯಾಗಿದ್ದ ‘ದಿಯಾ’ ಸಿನಿಮಾದ ಬಗ್ಗೆಯೂ ಮಾತನಾಡಿರುವ ಕೋಯ್ಲಿ , ಕ್ಲೈಮ್ಯಾಕ್ಸ್ ನೋಡಿ ದಿಯಾ ಕ್ಲೈಮ್ಯಾಕ್ಸ್ ನೋಡಿ ಶಾಕ್ ಆಯಿತು. ನಾನಿದನ್ನು ನಿರೀಕ್ಷಿಸಿರಲಿಲ್ಲ. ಹಿನ್ನೆಲೆ ಸಂಗೀತ ಚೆನ್ನಾಗಿದೆ. ಬಹಳ ಚೆನ್ನಾಗಿದೆ ಸಿನಿಮಾ. ಈ ಸಿನಿಮಾದ ಮುಂದಿನ ಭಾಗ ನಿರ್ಮಾಣ ಆಗುತ್ತಾ ಎಂದು ಕೇಳಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.