ಸಮನ್ಸ ನೀಡಿದಕ್ಕೆ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು
ಅಗರ್ತಲಾ: ದೂರಿನ ಆಧಾರದ ಮೇಲೆ ಪೊಲೀಸರು ಸಮನ್ಸ್ ನೀಡಿದ್ದಕ್ಕೆ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ನಡೆದಿದೆ.
ಪ್ರೇಮಿಗಳಿಬ್ಬರು ಹಲವಾರು ವರ್ಷಗಳಿಂದ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಹುಡುಗಿ ಅಪ್ರಾಪ್ತೆಯಾಗಿದ್ದು, ಪ್ರೇಮಿಗಳು ಇತ್ತೀಚಿಗೆ ಪರಾಗಿಯಾಗಿದ್ದರು. ಧಲೈ ಜಿಲ್ಲೆಯ ಹುಡುಗಿ 17 ವರ್ಷವಳಾಗಿದ್ದು, ಹುಡುಗಿಯ ತಂದೆ ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಆರೋಪಿಸಿ ಧಲೈ ಜಿಲ್ಲೆಯ ಗಂಡಚೆರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ, ಜೋಡಿ ಗೋಮತಿ ಜಿಲ್ಲೆಯ ಸಿಲಾಚೆರಾ ಪೊಲೀಸ್ ಠಾಣೆಯಿಂದ ಸುಮಾರು 30 ಕಿಮೀ ದೂರದಲ್ಲಿರುವ ಕಪ್ಟಲಿಯಲ್ಲಿರುವುದನ್ನು ತಿಳಿದುಬಂದಿದೆ. ಬಳಿಕ ಪೊಲೀಸರು ಶುಕ್ರವಾರ ಯುವಕ, ಯುವತಿಗೂ ಮತ್ತು ಅವರಿಬ್ಬರ ಪೋಷಕರಿಗೆ ಸಮನ್ಸ್ ನೀಡಿದ್ದರು.
ಇದರಿಂದ ತಮ್ಮಿಬ್ಬರಿಗೆ ಸಮಸ್ಯೆಯಾಗುತ್ತದೆ ಎಂದು ಭಾವಿಸಿ ಜೋಡಿ ವಿಷ ಸೇವಿಸಿ ಅದರ ಬಾಟಲಿಯನ್ನು ಪೊಲೀಸ್ ಠಾಣೆಯೊಳಗೆ ಎಸೆದಿದ್ದಾರೆ. ನಂತರ ಇಬ್ಬರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಭಾನುವಾರ ರಾತ್ರಿ ಹುಡುಗಿ ಗೋಮತಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟರೆ, ಸೋಮವಾರ ಅಗರ್ತಲಾದ ಜಿಬಿಪಿ ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದಾನೆ. ಇನ್ನೂ ಈ ದುರಂತ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಸಿಲಾಚೆರಾ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ (ಒಸಿ) ಶ್ರೀಕಾಂತ ರುದ್ರಪಾಲ್ ತಿಳಿಸಿದ್ದಾರೆ.