2014 ರಿಂದ LPG ಸಂಪರ್ಕ 14.5 ಕೋಟಿಯಿಂದ 30.39 ಕೋಟಿಗೆ ಹೆಚ್ಚಳ – ಹರ್ದೀಪ್ ಸಿಂಗ್ ಪುರಿ
ಭಾರತ 2014 ರಿಂದ ಇಲ್ಲಿಯವರೆಗೆ LPG ಸಂಪರ್ಕಗಳ ಸಂಖ್ಯೆಯನ್ನು 14.5 ಕೋಟಿಗಳಿಂದ 30.39 ಕೋಟಿಗಳಿಗೆ ಹೆಚ್ಚಿಸಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಒಂಬತ್ತು ಕೋಟಿ ಸಂಪರ್ಕಗಳನ್ನು ಒದಗಿಸಲಾಗಿದೆ ಮತ್ತು ಹೆಚ್ಚುವರಿ 60 ಲಕ್ಷ ಸಂಪರ್ಕಗಳನ್ನು ಅನುಮೋದಿಸಲಾಗಿದೆ.
ನರೇಂದ್ರ ಮೋದಿ ಸರ್ಕಾರದ ಎಂಟು ವರ್ಷಗಳ ಸಾಧನೆಗಳ ಕುರಿತು ಇಂದು ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಈ ವಿಷಯ ತಿಳಿಸಿದ್ದಾರೆ.
ಮುಂಬರುವ ವರ್ಷಗಳಲ್ಲಿ ಗ್ಯಾಸ್ ಪೈಪ್ಲೈನ್ ಸಂಪರ್ಕದ ಮೂಲಕ ಪ್ರತಿ ಮನೆಯನ್ನು ತಲುಪುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ಹೇಳಿದರು. 2014 ರಿಂದ ಪಿಎನ್ಜಿ ಸಂಪರ್ಕಗಳು 24 ಲಕ್ಷದಿಂದ 90.9 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದರು. ಈ ಅವಧಿಯಲ್ಲಿ ದೇಶವು ತನ್ನ ಸಿಎನ್ಜಿ ಕೇಂದ್ರಗಳ ಸಂಖ್ಯೆಯನ್ನು 936 ರಿಂದ ನಾಲ್ಕು ಸಾವಿರಕ್ಕೆ ಹೆಚ್ಚಿಸಿದೆ ಎಂದು ಅವರು ಹೇಳಿದರು.
ಎಥೆನಾಲ್ ಮಿಶ್ರಣದಲ್ಲಿ, 2014 ರ ವರೆಗೆ ದೇಶವು 1.5 ಪ್ರತಿಶತ ಎಥೆನಾಲ್ ಮಿಶ್ರಣವನ್ನು ಹೊಂದಿದ್ದರೆ, 2014 ರ ನಂತರ ಅದು ಈಗ 9.98 ಕ್ಕೆ ಏರಿದೆ ಎಂದು ಸಚಿವರು ಮಾಹಿತಿ ನೀಡಿದರು.
2025 ರ ವೇಳೆಗೆ 20 ಪ್ರತಿಶತ ಎಥೆನಾಲ್ ಮಿಶ್ರಣವನ್ನು ಸಾಧಿಸಲು ಕೇಂದ್ರವು ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. 2014 ರಿಂದ, ಭಾರತವು ತನ್ನ ಬಾಟಲಿಂಗ್ ಪ್ಲಾಂಟ್ಗಳ ಸಂಖ್ಯೆಯನ್ನು 187 ರಿಂದ 202 ಕ್ಕೆ ಹೆಚ್ಚಿಸಿದೆ. ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಹರ್ದೀಪ್ ಪುರಿ ದೇಶದಲ್ಲಿ ಇಂಧನದ ಕೊರತೆಯಿಲ್ಲ ಎಂದು ಹೇಳಿದರು.