LPG Cylinder: ಸತತ 4ನೇ ತಿಂಗಳು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆ….
ಸೆಪ್ಟಂಬರ್ ತಿಂಗಳ ಮೊದಲ ದಿನ ಸಿಲಿಂಡರ್ ಬಳಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ದೇಶದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಆದರೆ, ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ.
ಸೆಪ್ಟೆಂಬರ್ 1 ರಿಂದ ಇಂಡೇನ್‌ನ 19 ಕೆಜಿ ವಾಣಿಜ್ಯ ಸಿಲಿಂಡರ್ ದೆಹಲಿಯಲ್ಲಿ 91.50 ರೂ., ಕೋಲ್ಕತ್ತಾದಲ್ಲಿ 100 ರೂ., ಮುಂಬೈನಲ್ಲಿ 92.50 ರೂ., ಚೆನ್ನೈನಲ್ಲಿ 96 ರೂ. ಇಳಿಕೆಯಾಗಿದೆ. 14.2 ಕೆಜಿಯ ಗೃಹಬಳಕೆಯ LPG ಸಿಲಿಂಡರ್ ಬೆಲೆ ಯಥಾವತ್ ಹಳೆಯ ಬೆಲೆಯಲ್ಲಿ ಮಾತ್ರ ಲಭ್ಯವಿದೆ.
ದೇಶದ ಗ್ಯಾಸ್ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಿ ನಿಗದಿಪಡಿಸುತ್ತವೆ. ಆಗಸ್ಟ್ 1 ರಂದು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 36 ರೂ. ಇಳಿಕೆಯಾಗಿತ್ತು. ವಾಣಿಜ್ಯ LPG ಗ್ಯಾಸ್ ಗಳನ್ನ ಹೆಚ್ಚಾಗಿ ಹೋಟೆಲ್‌ಗಳು, ಆಹಾರ ಅಂಗಡಿಗಳು ಇತ್ಯಾದಿಗಳಲ್ಲಿ ಬಳಸಲಾಗುತ್ತದೆ. ಸತತ ಬೆಲೆ ಇಳಿಕೆಯಿಂದ ಹೋಟೆಲ್ ಉದ್ದಿಮೆದಾರರಿಗೆ ಬಿಗ್ ರಿಲೀಫ್ ಸಿಗಲಿದೆ. ಸತತ ನಾಲ್ಕನೇ ತಿಂಗಳು ವಾಣಿಜ್ಯ ಅನಿಲ ಬೆಲೆ ಇಳಿಕೆಯಾಗಿದೆ.
ಆದರೆ ಜುಲೈನಿಂದ ದೇಶದಲ್ಲಿ ಗೃಹಬಳಕೆಯ ಸಿಲಿಂಡರ್‌ಗಳ ಬೆಲೆ ಕಡಿಮೆ ಮಾಡಿಲ್ಲ. ಗೃಹ ಬಳಕೆಯ ಸಿಲಿಂಡರ್ ದೆಹಲಿಯಲ್ಲಿ ರೂ 1053, ಕೋಲ್ಕತ್ತಾದಲ್ಲಿ ರೂ 1079, ಮುಂಬೈನಲ್ಲಿ ರೂ 1052 ಮತ್ತು ಚೆನ್ನೈನಲ್ಲಿ ರೂ 1068 ಕ್ಕೆ ಲಭ್ಯವಿದೆ.
LPG Price Today: 19-kg cylinders get cheaper by up to ₹100. Check latest rates here








