LPG ಸಿಲಿಂಡರ್ ಸಬ್ಸಿಡಿಗೆ ಕತ್ತರಿ ಹಾಕಲಿದೆಯಾ ಕೇಂದ್ರ ಸರ್ಕಾರ ? ?
LPG ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದು ಹಾಕಲು ಕೇಂದ್ರ ಸರ್ಕಾರ ಯೋಚಿಸಿದೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಗ್ರಾಹಕರು ಪ್ರತಿ ಸಿಲಿಂಡರ್ಗೆ ಸಂಪೂರ್ಣವಾಗಿ 1,000 ರೂಪಾಯಿ ಪಾವತಿಸುವ ಪಾವತಿಸಬೇಕಾಗುತ್ತದೆ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಸರಕಾರ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ.
ಎಲ್ಪಿಜಿ ಸಿಲಿಂಡರ್ಗಳಿಗೆ ಸಬ್ಸಿಡಿ ನೀಡುವ ಕುರಿತು ಮೋದಿ ಸರ್ಕಾರ ಹಲವು ಬಾರಿ ಚರ್ಚಿಸಿದೆ. ವರದಿಗಳ ಪ್ರಕಾರ, ಸರ್ಕಾರಕ್ಕೆ 2 ಆಯ್ಕೆಗಳಿವೆ. ಮೊದಲನೆಯದಾಗಿ ಸಬ್ಸಿಡಿ ಇಲ್ಲದೆ ಸಿಲಿಂಡರ್ಗಳನ್ನು ಸರಬರಾಜು ಮಾಡುವುದು. ಎರಡನೇಯದು, ಕೆಲ ಗ್ರಾಹಕರಿಗೆ ಮಾತ್ರ ಸಬ್ಸಿಡಿ ಲಾಭ ನೀಡುವುದು. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿಯ ಲಾಭ ಮುಂದುವರಿಯಲಿದೆ.