RCB | ಲಕ್ನೋ ಬೇಟೆಗೆ ಲಯನ್ಸ್ ಪಡೆ ಹೇಗಿರಲಿದೆ…?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂತೂ ಇಂತೂ 15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿದೆ. ಈ ಆವೃತ್ತಿಯನ್ನು ಪಂಜಾಬ್ ವಿರುದ್ಧ ಸೋಲಿನೊಂದಿಗೆ ಆರಂಭಿಸಿದ ಬೆಂಗಳೂರು ತಂಡ, ಬಳಿಕ ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಇದಾದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿತ್ತು. ನಂತರ ಗೆಲುವಿನ ಟ್ರ್ಯಾಕ್ ಗೆ ಮರಳಿತು. ಹೀಗೆ ಸೋಲು ಗೆಲುವಿನ ಹಾದಿಯಲ್ಲಿ ಸಾಗಿದ ಬೆಂಗಳೂರು ತಂಡ ಇದೀಗ ಸತತ ಮೂರನೇ ಬಾರಿಗೆ ಐಪಿಎಲ್ ನ ಪ್ಲೇ ಆಫ್ಸ್ ಪ್ರವೇಶಿಸಿದೆ.
ತನ್ನ ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಲಿದೆ. ಹಾಗೇ ನೋಡಿದ್ರೆ ಕಳೆದ ಮೂರು ವರ್ಷಗಳಿಂದ ಆರ್ ಸಿಬಿ ಪ್ಲೇ ಆಫ್ಸ್ ಪ್ರವೇಶಿಸಿ, ಎಲಿಮಿನೇಟರ್ ನಲ್ಲಿ ಸೋಲುಂಡು ನಿರಾಸೆಯಿಂದ ಟೂರ್ನಿಯ ಅಭಿಯಾನ ಮುಗಿಸಿದೆ. ಹೀಗಾಗಿ ಈ ಬಾರಿ ಎಲಿಮಿನೇಟರ್ ಚಕ್ರವ್ಯೂಹವನ್ನು ಆರ್ ಸಿಬಿ ದಾಟುತ್ತಾ ಎಂಬ ಕುತೂಹಲಕಾರಿ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಯಾಕಂದರೇ ಈ ಬಾರಿ ಆರ್ ಸಿಬಿ ಬಲಿಷ್ಠ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸುತ್ತಿದೆ. ಲೀಗ್ ಹಂತದಲ್ಲಿ ಲಕ್ನೋ ತಂಡ ಎದುರಾಳಿಗಳ ಮೇಲೆ ಸವಾರಿ ಮಾಡಿದೆ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಲಕ್ನೋ ಬಲಿಷ್ಠವಾಗಿದೆ. ಹೀಗಾಗಿ ಆರ್ ಸಿಬಿ ಸಾಕಷ್ಟು ಪರಿಶ್ರಮವಹಿಸಬೇಕಾಗಿದೆ.
ಮುಖ್ಯವಾಗಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಒಂದು ಬದಲಾವಣೆ ಮಾಡಿಕೊಳ್ಳಬೇಕಿದೆ. ಆರಂಭಿಕರಾಗಿ ವಿರಾಟ್ ಕೊಹ್ಲಿ, ನಾಯಕ ಫಾಫ್ ಡುಪ್ಲಸಿಸ್ ಕಳೆದ ಪಂದ್ಯದಲ್ಲಿ ನೀಡಿದ್ದ ಪ್ರದರ್ಶನವನ್ನೇ ಮುಂದುವರೆಸಬೇಕು. ಇಬ್ಬರೂ ಜವಾಬ್ದಾರಿ ಅರಿತು ಬ್ಯಾಟ್ ಬೀಸಿದ್ರೆ ತಂಡಕ್ಕೆ ಯಾವುದೇ ಚಿಂತೆ ಇರೋದಿಲ್ಲ. ಮಿಡಲ್ ಆರ್ಡರ್ ನಲ್ಲಿ ರಜತ್, ಮ್ಯಾಕ್ಸ್ ವೆಲ್ ಎಂದಿನಂತೆ ತಂಡಕ್ಕೆ ನೆರವಾಗಬೇಕು, ಇವರಿಗೆ ಮಹಿಪಾಲ್ ಲೋಮ್ರೋರ್ ಸಾಥ್ ನೀಡಬೇಕು.
ಕೆಳಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್, ಶಹಬ್ಬಾಸ್ ಅಹ್ಮದ್ ಮ್ಯಾಚ್ ಫಿನಿಶ್ ಮಾಡಬೇಕು. ಹೀಗೆ ಆಗಿದ್ದೇ ಆದ್ದಲ್ಲಿ ಬ್ಯಾಟಿಂಗ್ ನಲ್ಲಿ ಯಾವುದೇ ಸಮಸ್ಯೆ ಇರೋದಿಲ್ಲ. ಆದ್ರೆ ಆರ್ ಸಿಬಿಗೆ ಪ್ರಾಬ್ಲಂ ಇರೋದು ಬೌಲಿಂಗ್ ನಲ್ಲಿ, ಹೆಜಲ್ ವುಡ್, ವನಿಂದು ಹಸರಂಗ ವಿಕೆಟ್ ಪಡೆಯುತ್ತಿದ್ದಾರೆ. ಆದ್ರೆ ಹೆಜಲ್ ವುಡ್, ಹರ್ಷಲ್ ದುಬಾರಿ ಆಗುತ್ತಿದ್ದಾರೆ. ಮುಖ್ಯವಾಗಿ ಈ ಆವೃತ್ತಿಯಲ್ಲಿ ಕಳಫೆ ಪ್ರದರ್ಶನ ನೀಡುತ್ತಿರುವ ಮೊಹ್ಮದ್ ಸಿರಾಜ್ ಪ್ಲೇಯಿಂಗ್ ಇಲೆವೆನ್ ನಲ್ಲಿ ಇರಬೇಕೋ ಬೇಡ್ವೋ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಯಾಕಂದರೇ ಪ್ರತಿ ಪಂದ್ಯದಲ್ಲಿ ದುಬಾರಿಯಾಗುತ್ತಿದ್ದ ಕಾರಣ ಸಿರಾಜ್ ಗೆ ಕಳೆದ ಪಂದ್ಯದಿಂದ ಕೋಕ್ ನೀಡಲಾಗಿತ್ತು. ಅವರ ಜಾಗದಲ್ಲಿ ಸಿದ್ಧಾರ್ಥ್ ಕೌಲ್ ಗೆ ಅವಕಾಶ ನೀಡಲಾಗಿತ್ತು. ಆದ್ರೆ ಕೌಲ್ ಕಮಾಲ್ ಮಾಡಲಿಲ್ಲ. ಬದಲಿಗೆ ಸಿರಾಜ್ ರಂತೆ ದುಬಾರಿಯಾದ್ರು. ಹೀಗಾಗಿ ಅವರ ಸ್ಥಾನಕ್ಕೆ ಯಾರನ್ನ ಆಡಿಸಬೇಕು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. lsh vs rcb match royal challengers bangalore prediction