ರೇಸ್.. ಅಡ್ವೆಂಚರ್.. ಆಕ್ಷನ್.. ಥ್ರಿಲ್ಲರ್ `ಮಡ್ಡಿ’ ಟೀಸರ್ ಸೂಪರ್..!
ಮೈ ಝುಮ್ ಎನಿಸೋ ರೇಸ್, ಅಬ್ಬಾ ಎನಿಸೋ ಅಡ್ವೆಂಚರ್, ಸೂಪರ್ ಗುರು ಎನಿಸೋ ಆಕ್ಷನ್, ವ್ಹಾವ್ ಎನಿಸೋ ಲೊಕೇಶನ್, ಥ್ರಿಲ್ಲರ್ ನ ಡೆಡ್ಲಿ ಕಾಂಬೋ ಸೂಪರ್ರೋ ಸೂಪರ್..! ಏನ್ ಗುರು ಟೀಸರ್ ಹೀಗಿದೆ.. ಇದು ಪಕ್ಕಾ ಬ್ಲಾಕ್ ಬಸ್ಟರ್.. ಮಗ ಈ ಸಿನಿಮಾ ಪಕ್ಕಾ ನೋಡ್ಲೇಬೇಕು ಇದು ಹೊಸ ಪ್ರತಿಭೆಗಳೇ ಕೂಡಿ ಮಾಡಿರುವ ಮಡ್ಡಿ ಸಿನಿಮಾದ ಟೀಸರ್ ಗೆ ಸಿಕ್ತಿರೋ ರೆಸ್ಪಾನ್ಸ್..!!
ಹೌದು..! ಒಂದೊಳ್ಳೆ ಕಥೆಯೊಂದಿಗೆ ಹೊಸ ಪ್ರತಿಭೆಗಳೇ ಕೂಡಿ ಮಾಡಿರುವ ಸಿನಿಮಾ ಮಡ್ಡಿ. ಸಿನಿಮಾದ ಹೆಸರೇ ಹೇಳುವಂತೆ ಇದೊಂದು ಕಂಪ್ಲೀಟ್ ಮಡ್ ರೇಸ್ ಸಿನಿಮಾ.
ದೊಡ್ಡ ಮಟ್ಟದಲ್ಲಿ ತಯಾರಾಗಿರುವ ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಮುಂಬೈನಲ್ಲಿ ಲಕ್ಷ್ಯೂರಿಯಸ್ ಫ್ಲಾಟ್ ಖರೀದಿಸಿದ್ದಾರಂತೆ ‘ಕಿರಿಕ್ ರಾಣಿ’…!
ಅಂದಹಾಗೆ ಈ ಹಿಂದೆ ರಿಲೀಸ್ ಆಗಿದ್ದ ಸಿನಿಮಾದ ಮೋಷನ್ ಪೋಸ್ಟರ್ ಎಲ್ಲರ ಗಮನ ಸೆಳೆದಿತ್ತು. ಇದೀಗ ಸಿನಿಮಾದ ಅಫೀಶಿಯಲ್ ಟೀಸರ್ ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಚಿಂದಿ ಉಡಾಯಿಸುತ್ತಿದೆ.
ಇನ್ನು ಟೀಸರ್ ವಿಚಾರಕ್ಕೆ ಬಂದ್ರೆ ಮಡ್ಡಿ ಟೀಸರ್ ಚಿಂದಿ..! ರವಿ ಬಸ್ರೂರ್ ಬಿಜಿಎಂ ಮೈಂಡ್ ಬ್ಲೋಯಿಂಗ್..! ಸಿನಿಮಾಟೋಗ್ರಾಫಿ ಬೊಂಬಾಟ್..! ಮುಖ್ಯವಾಗಿ ಟೀಸರ್ ಎಡಿಟಿಂಗ್ ಸೂಪರಃ ಸೂಪರಸ್ಯಃ ಸೂಪರೋಭ್ಯಃ ಅಷ್ಟೆ..! ಟೀಸರ್ ನಲ್ಲಿ ಬರೋ ಒಂದೊಂದು ಸೀನ್ ವ್ಹಾವ್ ಎಸಿಸುತ್ತೆ.
ಡಾ|| ಪ್ರಗ್ಬಲ್ ದಾಸ್ ಅವರ ನಿರ್ದೇಶನದ ತಾಕತ್ತು ಟೀಸರ್ ನಲ್ಲಿ ಎದ್ದು ಕಾಣುತ್ತಿದೆ. ಪಳಗಿದ ತಂತ್ರಜ್ಞರ ಜೊತೆ ಸೇರಿ ಈ ಸಿನಿಮಾ ಪಿಕೆ7 ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಪ್ರೇಮ್ ಕೃಷ್ಣ ದಾಸ್ ಅವರು ಫ್ಯಾಷನ್ ನೆಟ್ ಆಗಿ ಬಂಡವಾಳ ಹೂಡಿದ್ದಾರೆ ಅನ್ನೋದು ಟೀಸರ್ ನಲ್ಲಿ ಗೊತ್ತಾಗುತ್ತಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದ್ರೆ ಇದುವರೆಗೂ ಭಾರತೀಯ ಸಿನಿಮಾ ಇತಿಹಾಸದಲ್ಲೇ ಸಂಪೂರ್ಣ ಮಡ್ ರೇಸ್ ನ ಸಿನಿಮಾವೊಂದನ್ನ ಯಾರೂ ಸಹ ಮಾಡಿಲ್ಲ. ಇದೀಗ ಆ ಸಾಹಸಕ್ಕೆ ಪ್ರಗ್ಬಲ್ ದಾಸ್ & ಟೀಮ್ ಕೈ ಹಾಕಿದೆ, ಉತ್ತಮ ಗುಣಮಟ್ಟದ ಸಿನಿಮಾ ನೀಡುವ ಉದ್ದೇಶದಿಂದ, ಸರಾಸರಿ 5 ವರ್ಷದಿಂದ ಮಡ್ ರೇಸ್ ಬಗ್ಗೆ ಕಲಿತುಕೊಂಡು ಕಲಾವಿದರಿಗೆ ಟ್ರೈನಿಂಗ್ ನೀಡಿ ಡ್ಯೂಪ್ ಇಲ್ಲದೆ ಚಿತ್ರೀಕರಿಸಿರುವುದು ಚಿತ್ರದ ಮತ್ತೊಂದು ವಿಶೇಷ.
ರಿಯಲ್ ಜೀಪ್ಗಳಲ್ಲಿ ರಿಯಲ್ ರೇಸ್ ಹಾಗೂ ರಿಯಲ್ ಆಕ್ಸಿಡೆಂಟ್ ಗಳ ನೈಜತೆ ಸೆರೆಹಿಡಿಯಲು ಸಿನಿಮಾದ ಯಾವ ಭಾಗವೂ ಕಮ್ಮಿ ಎನಿಸದಂತೆ ಭಾರಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ, ಕೆ.ಜಿ.ಎಫ್ ಸಿನಿಮಾದ ಮೂಲಕ ಭಾರತದಾದ್ಯಂತ ಸದ್ದು ಮಾಡಿರುವ ರವಿ ಬಸ್ರೂರ್ ಈ ಸಿನಿಮಾಗೆ ಸಂಗೀತ ಹಾಗೂ ಸೌಂಡ್ ಡಿಸೈನ್ ಮಾಡಿದ್ದಾರೆ. ತಮಿಳಿನ ರಾಕ್ಷಸನ್ ಚಿತ್ರದ ಮೂಲಕ ಸಂಕಲನದಲ್ಲಿ ಭಾರಿ ಹೆಸರು ಮಾಡಿದ ಸ್ಯಾಲ್ ಲೋಕೇಶ್ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ಸಿನಿಮಾಗೆ ಕೆ.ಜಿ.ರತೀಶ್ ಅವರ ಛಾಯಾಗ್ರಹಣವಿದೆ.
ಇನ್ನು ಸಿನಿಮಾದಲ್ಲಿ ಯುವನ್, ರಿಧಾನ್ ಕೃಷ್ಣ ಅನುಷಾ ಸುರೇಶ್, ಅಮಿತ್ ಶಿವದಾಸ್ ನಾಯರ್, ಹರಿರ್ಶ ಪೆರಾಡಿ, ವಿಜಯನ್, ರೆಂಜಿ ಪೆನಿಕರ್ ಸೇರಿದಂತೆ ಅನೇಕರ ತಾರಾಬಳಗವಿದೆ. ಏಪ್ರಿಲ್ ಅಥವಾ ಮೇ ಹೊತ್ತಿಗೆ ಸಿನಿಮಾ ಚಿತ್ರಮಂದಿರದಲ್ಲಿ ಅಬ್ಬರಿಸಲಿದೆ.