ಅಪಘಾತಕ್ಕೆ ಕಾರಣನಾದ ಬಸ್ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ….

1 min read

ಅಪಘಾತಕ್ಕೆ ಕಾರಣವಾದ ಬಸ್ ಚಾಲಕನಿಗೆ 190 ವರ್ಷ ಜೈಲಿ ಶಿಕ್ಷೆ….

ಅತೀವೇಗದ ಬಸ್ ಚಾಲನೆಯಿಂದಾಗಿ 19 ಜನ ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ  ಬಸ್ ಚಾಲಕನ್ನ 190 ವರ್ಷಗಳ  ಅವಧಿಗೆ ಜೈಲು ಶಿಕ್ಷೆ ವಿಧಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮೇ 2015 ರಂದು ಮಧ್ಯಪ್ರದೇಶದ ಪನ್ನಾ ಎಂಬ ಪ್ರದೇಶದಲ್ಲಿ ರಸ್ತೆ ಅಪಘಾತದಲ್ಲಿ ಸಜೀವ ದಹನಗೊಂಡ 19 ಪ್ರಯಾಣಿಕರಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪರವಾಗಿ ಪ್ರತ್ಯೇಕ ಜೈಲು ಶಿಕ್ಷೆ ಅನುಭವಿಸಬೇಕು ಎಂದು  ಕೋರ್ಟ್ ಹೇಳಿದೆ.

ಬಸ್ ಚಾಲಕ ಮೊಹಮ್ಮದ್ ಶಂಶುದ್ದೀನ್ (47) ಎಂಬ ವ್ಯಕ್ತಿಯನ್ನ ಶುಕ್ರವಾರ ಮಧ್ಯಪ್ರದೇಶದ ಮಧ್ಯಪ್ರದೇಶ ರಾಜ್ಯದ ಪನ್ನಾ ಜಿಲ್ಲೆಯ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.

65 ಪ್ರಯಾಣಿಕರಿದ್ದ ಬಸ್ ಅನ್ನು ಶಂಶುದ್ದೀನ್ ಚಾಲನೆ ಮಾಡುತ್ತಿದ್ದಾಗ ಸೇತುವೆಯಿಂದ  ಕಾಲುವೆಗೆ ಬಿದ್ದಿತ್ತು. ತಕ್ಷಣವೇ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, 19 ಪ್ರಯಾಣಿಕರು ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ತನಿಖೆಯ ವೇಳೆ ಶಂಶುದ್ದೀನ್ ಅಜಾಗರೂಕತೆಯಿಂದ ಚಾಲನೆ ಮಾಡಿರುವುದು ದೃಡಪಟ್ಟಿತ್ತು. ವಾಹನದ ತುರ್ತು ನಿರ್ಗಮನ ಮಾರ್ಗಗಳನ್ನು ಅಕ್ರಮವಾಗಿ ಮಾರ್ಪಡಿಸಿ  ಹೆಚ್ಚುವರಿ ಆಸನವನ್ನು ಅಳವಡಿಸಲಾಗಿತ್ತು. ಇದರಿಂದ ಬಸ್ ಹೊತ್ತಿ ಉರಿದರೂ  ಬಸ್ ನಿಂದ ಹೊರ ಬರಲಾಗದೆ ಜನರು ಸಜೀವ ದಹನಗೊಂಡಿದ್ದರು.   ಶಂಶುದ್ದೀನ್ ನರಹತ್ಯೆಯ ಅಪರಾಧಿ ಎಂದು ನ್ಯಾಯಾಧೀಶ ಆರ್.ಪಿ.ಸೋಂಕರ್ ಹೇಳಿದ್ದಾರೆ.

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd