ಕೋಳಿ ಮೊಟ್ಟೆ ಇಡೋದನ್ನು ನಿಲ್ಲಿಸಿದಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಭೂಪ..!
ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕೋಳಿ ಸಾಕಾಣಿಕೆ ಮಾಡುತ್ತಿದ್ದ ವ್ಯಕ್ತಿಯೋರ್ವ ಕೋಳಿಗಳು ಮೊಟ್ಟೆ ಇಡುವುದನ್ನ ನಿಲ್ಲಿಸಿದೆ ಎಂಬ ಕಾರಣಕ್ಕೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ಧಾನೆ.
ಹೌದು.. ಆಹಾರ ಉತ್ಪಾದಕ ಘಟಕಗಳ ಆಹಾರವನ್ನು ತಂದು ನನ್ನ ಕೋಳಿಗಳಿಗೆ ನೀಡಿದ್ದೆ. ಅದನ್ನು ತಿಂದ ನಂತರ ಕೋಳಿಗಳು ಮೊಟ್ಟೆ ಇಡುವುದನ್ನು ನಿಲ್ಲಿಸಿವೆ ಎಂದು ಪುಣೆಯ ಅಹ್ಮದ್ ನಗರದ ಕೋಳಿ ಆಹಾರ ಉತ್ಪಾದನಾ ಕಂಪನಿ ವಿರುದ್ಧ ದೂರು ದಾಖಲಾಗಿದೆ. ಈ ಕಂಪನಿಯಿಂದ ಕೋಳಿಗಳಿಗೆ ಆಹಾರ ತಂದು ಹಾಕಿದ್ದ ಎಲ್ಲಾ ಫಾರಂಗಳಲ್ಲಿ ಕೋಳಿಗಳು ಮೊಟ್ಟೆ ಹಾಕುವುದನ್ನು ನಿಲ್ಲಿಸಿವೆ ಎನ್ನಲಾಗಿದೆ.
ಪೊಲೀಸರು ಅಹ್ಮದ್ ನಗರದ ಪಶುಸಂಗೋಪನಾ ಅಧಿಕಾರಿಯನ್ನು ಭೇಟಿ ಮಾಡಿದ್ದರು. ಆಹಾರವನ್ನು ಪರೀಕ್ಷೆ ಮಾಡಲಾಗಿದೆ. ಕೆಲವು ಆಹಾರಗಳು ನಿರ್ದಿಷ್ಟ ತಳಿಯ ಕೋಳಿಗಳಿಗೆ ಹೊಂದಾಣಿಕೆಯಾಗುವುದಿಲ್ಲ. ಇದೊಂದು ಸಾಮಾನ್ಯ ವಿದ್ಯಮಾನ ಎಂದು ಪಶುಸಂಗೋಪನಾ ಅಧಿಕಾರಿ ಪೊಲೀಸರಿಗೆ ಹೇಳಿದ್ದಾರೆ.
ಆರೋಪ ಕೇಳಿ ಬರುತ್ತಿದ್ದಂತೆ ಆಹಾರ ಉತ್ಪಾದನಾ ಕಂಪನಿಯು ಕೋಳಿ ಸಾಕಾಣೆಗಾರರಿಗೆ ಪರಿಹಾರ ನೀಡುವುದಾಗಿ ತಿಳಿಸಿದೆ. ಪರಿಹಾರ ನೀಡುವುದಾಗಿ ಕಂಪನಿ ಹೇಳಿರುವುದರಿಂದ ಕಂಪನಿ ವಿರುದ್ಧ ಎಫ್ಐ ಆರ್ ದಾಖಲಾಗಿಲ್ಲ.
ಮದುವೆಯಾಗು ಎಂದು ಮನೆಗೆ ನುಗ್ಗಿದ್ದ ಯುವತಿಯನ್ನ ಕೊಲೆಗೈದ ಪ್ರಿಯಕರ