Mahesh Babu | ಎಸ್ ಎಸ್ ರಾಜಮೌಳಿಗೆ ಮಹೇಶ್ ಬಾಬು ಕಂಡೀಷನ್
ಸರ್ಕಾರು ವಾರಿ ಪಾಟ ಸಿನಿಮಾದ ಮೂಲಕ ಸೂಪರ್ ಸ್ಟಾರ್ ಮಹೇಶ್ ಬಾಬು ಸೂಪರ್ ಹಿಟ್ ಪಡೆದುಕೊಂಡಿದ್ದಾರೆ.
ಸದ್ಯ ಎರಡು ಸಿನಿಮಾಗಳನ್ನು ಮಹೇಶ್ ಒಪ್ಪಿಕೊಂಡಿದ್ದು, ಒಂದು ತ್ರಿವಿಕ್ರಂ ಸಿನಿಮಾ ಮತ್ತೊಂದು ಎಸ್ ಎಸ್ ರಾಜಮೌಳಿ ಸಿನಿಮಾ.
ಈಪೈಕಿ ರಾಜಮೌಳಿ ಸಿನಿಮಾದ ಕಡೆ ಮಹೇಶ್ ಗಮನ ಹರಿಸಿದ್ದಾರೆ.
ಈ ಸಿನಿಮಾ ಸೆಟ್ಟೇರಲು ತುಂಬಾ ಸಮಯವಿದ್ದು, ಅದಾಗ್ಲೆ ಸಿನಿಮಾ ಬಗ್ಗೆ ಕೆಲವೊಂದು ಪುಕಾರುಗಳು ಹರಿದಾಡುತ್ತಿವೆ.
ಈ ಸಿನಿಮಾಗಾಗಿ ರಾಜಮೌಳಿಗೆ ಮಹೇಶ್ ಬಾಬು ಒಂದು ಕಂಡೀಷನ್ ಇಟ್ಟಿದ್ದಾರೆ.
ಅದು ಏನಂದರೇ ಈ ಸಿನಿಮಾದಲ್ಲಿ ಬಾಲಿವುಡ್ ಹೀರೋಯಿನ್ ಬೇಡವೆಂದು, ಟಾಲಿವುಡ್ ಹೀರೋಯಿನ್ ಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರಂತೆ.
ಈ ಹಿಂದಿನ ಸಿನಿಮಾಗಳಲ್ಲಿ ಮಹೇಶ್ ಬಾಬು ಬಾಲಿವುಡ್ ನಟಿಯರೊಂದಿಗೆ ನಟಿಸಿದ್ದಾರೆ.
ಆದ್ರೆ ರಾಜಮೌಳಿ ಸಿನಿಮಾಗಳಲ್ಲಿ ಹೀರೋಯಿನ್ ಪಾತ್ರವಲ್ಲದೇ ಬೇರೆ ಪಾತ್ರಗಳ ಆಯ್ಕೆ ವಿಷಯದಲ್ಲಿ ರಾಜಮೌಳಿ ಅವರದ್ದೇ ಮೇಲು ಗೈ ಆಗಿರುತ್ತದೆ.
ಆದ್ರೆ ಈ ಬಾರಿ ಮಹೇಶ್ ಬಾಬುಗಾಗಿ ರಾಜಮೌಳಿ ಕಾಂಪ್ರಮೈಜ್ ಆಗುತ್ತಾರಾ ಎಂಬೋದನ್ನ ಕಾದು ನೋಡಬೇಕಾಗುತ್ತದೆ.