ಆಲಿಯಾ ಯಾವತ್ತೂ ಮದುವೆಯಾಗಬಾರದು ಎಂದು ಬೆದರಿಕೆ ಹಾಕಿದ ಮಹೇಶ್ ಭಟ್
ಪ್ರತಿಯೊಬ್ಬ ತಂದೆ ತನ್ನ ಮಗಳ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಆಲಿಯಾ ಭಟ್ ಅವರ ತಂದೆ ಮಹೇಶ್ ಭಟ್ ಕೂಡ ಮಗಳ ಮೇಲೆ ಅದೇ ರೀತಿ ಕಾಳಜಿ ವಹಿಸುತ್ತಾರೆ. ವಿಶೇಷವಾಗಿ ಪರದೆಯ ಮೇಲೆ ಚುಂಬನ ಮತ್ತು ನಿಜ ಜೀವನದಲ್ಲಿ ಡೇಟಿಂಗ್ ವಿಷಯ ಬಂದಾಗ ಆಶಿಕ್ವಿ ನಿರ್ದೇಶಕರು ತಮ್ಮ ಮಗಳ ಬಗ್ಗೆ ಹೆಚ್ಚು ಪೊಸೆಸಿವ್ ಆಗಿದ್ದಾರೆ.
ಆಲಿಯಾ ಭಟ್ ಹಳೆಯ ಸಂದರ್ಶನದಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಮಹೇಶ್ ಭಟ್ ಅವರು ತಾನು ಮದುವೆಯಾಗುವುದನ್ನು ಬಯಸುವುದಿಲ್ಲ ಎಂದು ಆಲಿಯಾ ಹೇಳಿದ್ದಾರೆ. ಇದಲ್ಲದೆ, ಒಮ್ಮೆ ಮಹೇಶ್ ಭಟ್ ಅವರು ಶಾಹೀನ್ ಮತ್ತು ಆಲಿಯಾಳನ್ನು ರೂಮ್ ಒಳಗೆ ಹಾಕಿ ಬೀಗ ಹಾಕುತ್ತೇನೆ ಮತ್ತು ಅವರ ಕಣ್ಣಿನಿಂದ ದೂರವಿರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದನ್ನು ಆಲಿಯಾ ಭಟ್ ಬಹಿರಂಗ ಪಡಿಸಿದ್ದಾರೆ.
ಆಲಿಯಾ ಭಟ್, ನೀವು ಎಲ್ಲಿಯೂ ಹೋಗಲು ಸಾಧ್ಯವಿಲ್ಲ ಎಂದು ನನ್ನ ತಂದೆ ಹೇಳಿದ್ದರು ಮತ್ತು ನಾನು ನಿಮ್ಮೆಲ್ಲರನ್ನೂ ಕೋಣೆ ಒಳಗೆ ಹಾಕಿ ಬೀಗ ಹಾಕುತ್ತೇನೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ಅವರು ಹೇಳಿದಂತೆ ಮಾಡುವವರು ಮತ್ತು ನಾವಿಬ್ಬರೂ ಮದುವೆಯಾಗುವುದನ್ನು ನೋಡಲು ನಾವು ಬಯಸುವುದಿಲ್ಲ ಎಂದು ಹೇಳುತ್ತಾರೆ. ಅವರು ಹಾಗೆ. ಅವರು ಅದನ್ನು ನಿಜವಾಗಿಯೂ ಮಾಡುತ್ತಾರೆ. ಅವರು ತುಂಬಾ ಪಾಸಿಟಿವ್ ಮತ್ತು ನಾವು ಮದುವೆಯಾಗುವುದನ್ನು ಬಯಸುವುದಿಲ್ಲ ಎಂದು ಆಲಿಯಾ ಹೇಳಿದ್ದಾರೆ
ಆಲಿಯಾ ಎರಡು ಚಿತ್ರಗಳಲ್ಲಿ ನಟಿಸಿದ ಬಳಿಕ ನೀಡಿದ ಸಂದರ್ಶನದಲ್ಲಿ ಅರ್ಜುನ್ ಕಪೂರ್ ಅವರ ಚುಂಬನ ದೃಶ್ಯದ ಬಗ್ಗೆ ಅದು ಕೇವಲ ನಟನೆ ಎಂದು ಹೇಳಿದರು. ನಿಜ ಜೀವನದಲ್ಲಿ ನೀನು ನನ್ನ ಮುಂದೆ ಯಾರನ್ನಾದರೂ ಚುಂಬಿಸಿದರೆ ನಾನು ನಿನಗೆ ಕಪಾಳಮೋಕ್ಷ ಮಾಡುತ್ತೇನೆ ಎಂದು ಪಾಪಾ ಹೇಳಿದ್ದರು ಎಂದು ಆಲಿಯಾ ಹೇಳಿದ್ದಾರೆ.
ಬಾಳೆಹಣ್ಣಿನೊಂದಿಗೆ ಹಾಲು ಸೇವಿಸುವುದರ ಆರೋಗ್ಯ ಪ್ರಯೋಜನಗಳು https://t.co/vUrt3OH4rL
— Saaksha TV (@SaakshaTv) March 16, 2021
ವಾಟ್ಸಾಪ್ ನಲ್ಲಿ ರೈಲಿನ ಸಮಯದ ಆಪ್ಡೇಟ್ಸ್ (live status) ಪಡೆಯುವುದು ಹೇಗೆ – ಇಲ್ಲಿದೆ ಮಾಹಿತಿ https://t.co/zCUP18XFFs
— Saaksha TV (@SaakshaTv) March 16, 2021
ಚಟ್ಟಂಬಡೆ / ಮಸಾಲ ವಡಾ https://t.co/EgnEuP7qTp
— Saaksha TV (@SaakshaTv) March 16, 2021