ADVERTISEMENT
Friday, December 12, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಬಿಡದಿ ಭೂಮಿ ಲೂಟಿಗೆ ಬಿಡೆನು: ಕನಕಪುರದಲ್ಲಿ ಟೌನ್‌ಶಿಪ್ ಮಾಡಿ; ಸರ್ಕಾರದ ವಿರುದ್ಧ ಕುಮಾರಸ್ವಾಮಿ ಸಮರ!

Make a township in Kanakapura; Kumaraswamy's war against the government!

Shwetha by Shwetha
November 7, 2025
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಮಂಡ್ಯ: “ಬಿಡದಿ ಟೌನ್‌ಶಿಪ್‌ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಲೂಟಿ ಮಾಡಲು ಹೊರಟಿರುವ ಈ ಸರ್ಕಾರದ ಹುನ್ನಾರಕ್ಕೆ ಬಲಿಯಾಗಬೇಡಿ. ನಿಮ್ಮ ಜಮೀನಿನ ಒಂದೇ ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡಬೇಡಿ, ಯಾರಿಗೂ ಹೆದರುವ ಅಗತ್ಯವಿಲ್ಲ. ನಿಮ್ಮೆಲ್ಲರ ಜೊತೆ ನಾನಿದ್ದೇನೆ,” ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರೈತರಿಗೆ ಸಂಪೂರ್ಣ ಅಭಯ ನೀಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ನೇರವಾಗಿ ಸವಾಲು ಹಾಕಿದ್ದಾರೆ.

ಮಂಡ್ಯದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಕಳೆದ ಎರಡು ತಿಂಗಳಿಂದ ಬಿಡದಿಯ ರೈತರು ತಮ್ಮ ಭೂಮಿ ಉಳಿಸಿಕೊಳ್ಳಲು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೆ, ರೈತರ ಗೋಳು ಕೇಳಬೇಕಾದ ಈ ಸರ್ಕಾರ, ರಿಯಲ್ ಎಸ್ಟೇಟ್ ಕುಳಗಳ ಹಿತಾಸಕ್ತಿಗೆ ಮಣೆ ಹಾಕುತ್ತಿದೆ. ಇದು ರೈತ ವಿರೋಧಿ ಧೋರಣೆಯ ಪರಮಾವಧಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

Related posts

ಬೆಂಗಳೂರಿನ ಕೈ ತಪ್ಪುತ್ತಾ ಐಪಿಎಲ್..! ರಾಜ್ಯ ಸರ್ಕಾರದ ಕೈಯಲ್ಲಿದೆ ಚಿನ್ನಸ್ವಾಮಿ ಅಂಗಣದ ಭವಿಷ್ಯ..!

ಬೆಂಗಳೂರಿನ ಕೈ ತಪ್ಪುತ್ತಾ ಐಪಿಎಲ್..! ರಾಜ್ಯ ಸರ್ಕಾರದ ಕೈಯಲ್ಲಿದೆ ಚಿನ್ನಸ್ವಾಮಿ ಅಂಗಣದ ಭವಿಷ್ಯ..!

December 11, 2025
 ನೀವು ಕಳೆದುಕೊಂಡು ನಿಮ್ಮ ಆಸ್ತಿಪಾಸ್ತಿ ಮರಳಿ ಸಿದ್ದಿಸಿಕೊಳ್ಳಲು ಇಲ್ಲಿದೆ ಸುಲಭ ಕಾರ್ತವೀರ್ಯಾರ್ಜುನ ಸ್ವಾಮಿ ಮಂತ್ರದ ತಂತ್ರ ವಿಧಾನ..

 ನೀವು ಕಳೆದುಕೊಂಡು ನಿಮ್ಮ ಆಸ್ತಿಪಾಸ್ತಿ ಮರಳಿ ಸಿದ್ದಿಸಿಕೊಳ್ಳಲು ಇಲ್ಲಿದೆ ಸುಲಭ ಕಾರ್ತವೀರ್ಯಾರ್ಜುನ ಸ್ವಾಮಿ ಮಂತ್ರದ ತಂತ್ರ ವಿಧಾನ..

December 11, 2025

ನನ್ನ ಕಾಲದ ತೀರ್ಮಾನ ಬೇರೆ, ಈಗಿನ ಹುನ್ನಾರವೇ ಬೇರೆ

ಬಿಡದಿ ಟೌನ್‌ಶಿಪ್ ಯೋಜನೆ ಕುಮಾರಸ್ವಾಮಿ ಅವರ ಕಾಲದಲ್ಲೇ ರೂಪಿಸಿದ್ದು ಎಂಬ ಟೀಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಅವರು, “ನನ್ನ ಹೆಸರಿನಲ್ಲಿ ರಕ್ಷಣೆ ಪಡೆದುಕೊಳ್ಳುವ ಪ್ರಯತ್ನ ಮಾಡಬೇಡಿ. ನಾನು ಮುಖ್ಯಮಂತ್ರಿಯಾಗಿದ್ದಾಗ ತೆಗೆದುಕೊಂಡ ತೀರ್ಮಾನಕ್ಕೂ, ಈಗಿನ ತೀರ್ಮಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಂದು ಆ ಭೂಮಿಗೆ ಇಷ್ಟೊಂದು ಬೆಲೆ ಇರಲಿಲ್ಲ. ಆದರೆ, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಂದ ನಂತರ ಅಲ್ಲಿನ ಭೂಮಿಯ ಬೆಲೆ ಗಗನಕ್ಕೇರಿದೆ. ಈಗ 9 ಸಾವಿರ ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೊರಟಿದ್ದಾರೆ. ಇದು ಟೌನ್‌ಶಿಪ್ ನಿರ್ಮಾಣಕ್ಕಿಂತ ಹೆಚ್ಚಾಗಿ ಭೂಮಿ ಲೂಟಿ ಮಾಡುವ ಹುನ್ನಾರ” ಎಂದು ಗಂಭೀರ ಆರೋಪ ಮಾಡಿದರು.

ಈಗಲ್‌ಟನ್‌ಗೆ ಒಂದು ನ್ಯಾಯ, ರೈತರಿಗೊಂದು ನ್ಯಾಯವೇ?

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿ ಮಾತನಾಡಿದ ಕುಮಾರಸ್ವಾಮಿ, “ಬಿಡದಿಯಲ್ಲೇ ಇರುವ ಈಗಲ್‌ಟನ್ ಗಾಲ್ಫ್ ಕ್ಲಬ್, ಸರ್ಕಾರಿ ಕರಾಬು ಭೂಮಿಯನ್ನು ಅತಿಕ್ರಮಿಸಿಕೊಂಡಿತ್ತು. ಹಿಂದೆ ಇದೇ ಡಿ.ಕೆ. ಶಿವಕುಮಾರ್ ಅವರು ಅಲ್ಲಿಗೆ ಊಟಕ್ಕೆ ಹೋದಾಗ, ₹98 ಸಾವಿರ ಬಿಲ್ ಕೊಟ್ಟರೆಂದು ಸಿಟ್ಟಿಗೆದ್ದು, 70 ಎಕರೆ ಭೂಮಿಗೆ ₹984 ಕೋಟಿ ದಂಡ ವಿಧಿಸುವ ನಿರ್ಣಯವನ್ನು ಸಂಪುಟದಲ್ಲಿ ಕೈಗೊಂಡಿದ್ದರು. ಅದರ ಪ್ರಕಾರ, ಪ್ರತಿ ಎಕರೆಗೆ ಸುಮಾರು 13 ಕೋಟಿ ರೂಪಾಯಿ ದರ ನಿಗದಿಯಾಯಿತು. ನಿಮ್ಮದೇ ಸರ್ಕಾರ, ನಿಮ್ಮದೇ ಸಚಿವರು ನಿಗದಿ ಮಾಡಿದ ದರ ಅದು. ಈಗ ಅದೇ ಮಾನದಂಡವನ್ನು ರೈತರಿಗೂ ಅನ್ವಯಿಸಿ, ಪ್ರತಿ ಎಕರೆಗೆ 13 ಕೋಟಿ ರೂಪಾಯಿ ಪರಿಹಾರ ನೀಡಿ. ಆಗ ನೋಡೋಣ” ಎಂದು ನೇರ ಸವಾಲು ಹಾಕಿದರು.

ಟೌನ್‌ಶಿಪ್ ಬೇಕಿದ್ದರೆ ಕನಕಪುರದಲ್ಲಿ ಮಾಡಿ

“ನಿಮಗೆ ಟೌನ್‌ಶಿಪ್ ಮಾಡಲೇಬೇಕೆಂಬ ಹಠವಿದ್ದರೆ, ಫಲವತ್ತಾದ ಬಿಡದಿ ಭೂಮಿ ಯಾಕೆ ಬೇಕು? ನಿಮ್ಮ ಕನಕಪುರದಲ್ಲೇ ಮಾಡಿ. ಹಿಂದೆ ಕನಕಪುರದಲ್ಲಿ ಹಾಲಿನ ಡೇರಿ ಮಾಡಲು ರೈತರಿಂದ ಭೂಮಿ ಪಡೆದಾಗ ಎಷ್ಟು ಪರಿಹಾರ ಕೊಟ್ಟಿದ್ದೀರಿ? ನಿಮ್ಮ ಆಪ್ತರಿಗೆ ಎಷ್ಟು ಕೊಟ್ಟಿದ್ದೀರಿ ಎಂಬುದು ಎಲ್ಲರಿಗೂ ಗೊತ್ತು. ನಿಮ್ಮ ಅಧಿಕಾರಿಗಳೇ ಹೇಳುವಂತೆ ಕನಕಪುರದಲ್ಲಿ ಸಾಕಷ್ಟು ಒಣ ಬೇಸಾಯದ ಭೂಮಿ ಇದೆ. ಆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಟೌನ್‌ಶಿಪ್ ನಿರ್ಮಿಸಬಹುದಲ್ಲವೇ? ರಾಜ್ಯದಲ್ಲಿ ಇಂತಹ ಭೂಮಿ ಬೇಕಾದಷ್ಟಿದೆ. ಅದೆಲ್ಲವನ್ನೂ ಬಿಟ್ಟು ಬಿಡದಿಯ ಚಿನ್ನದಂತಹ ಭೂಮಿಯ ಮೇಲೆಯೇ ನಿಮ್ಮ ಕಣ್ಣು ಬಿದ್ದಿರುವುದೇಕೆ?” ಎಂದು ಕೆಂಡ ಕಾರಿದರು.

ಕಬ್ಬು ಬೆಳೆಗಾರರ ಬಗ್ಗೆ ನಿರ್ಲಕ್ಷ್ಯ, ಇದು ರೈತ ವಿರೋಧಿ ಸರ್ಕಾರ

ರಾಜ್ಯದಲ್ಲಿ ಕಬ್ಬು ಬೆಳೆಗಾರರು ದರ ನಿಗದಿಗಾಗಿ ನಡೆಸುತ್ತಿರುವ ಹೋರಾಟದ ಬಗ್ಗೆಯೂ ಪ್ರಸ್ತಾಪಿಸಿದ ಕುಮಾರಸ್ವಾಮಿ, “ನಾನು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾಗಲೂ ರೈತರ ಹಿತ ಕಾಪಾಡಲು ಶ್ರಮಿಸಿದ್ದೆ. ಆದರೆ, 136 ಸ್ಥಾನ ಗೆದ್ದು ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿರುವ ಈ ಸರ್ಕಾರಕ್ಕೆ ಏನಾಗಿದೆ ದರಿದ್ರ? ಕಳೆದ ಏಳು ದಿನಗಳಿಂದ ರೈತರನ್ನು ರಸ್ತೆಯಲ್ಲಿ ಮಲಗಿಸುವ ಸ್ಥಿತಿ ತರಬೇಕಿತ್ತೇ? ಈ ಸರ್ಕಾರಕ್ಕೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ಇದು ಸಂಪೂರ್ಣ ರೈತ ವಿರೋಧಿ ಸರ್ಕಾರ” ಎಂದು ತೀವ್ರವಾಗಿ ಟೀಕಿಸಿದರು.

ShareTweetSendShare
Join us on:

Related Posts

ಬೆಂಗಳೂರಿನ ಕೈ ತಪ್ಪುತ್ತಾ ಐಪಿಎಲ್..! ರಾಜ್ಯ ಸರ್ಕಾರದ ಕೈಯಲ್ಲಿದೆ ಚಿನ್ನಸ್ವಾಮಿ ಅಂಗಣದ ಭವಿಷ್ಯ..!

ಬೆಂಗಳೂರಿನ ಕೈ ತಪ್ಪುತ್ತಾ ಐಪಿಎಲ್..! ರಾಜ್ಯ ಸರ್ಕಾರದ ಕೈಯಲ್ಲಿದೆ ಚಿನ್ನಸ್ವಾಮಿ ಅಂಗಣದ ಭವಿಷ್ಯ..!

by admin
December 11, 2025
0

ಚಿನ್ನಸ್ವಾಮಿ ಕ್ರೀಡಾಂಗಣ..ಕ್ರೀಡಾ ಕ್ಷೇತ್ರದಲ್ಲಿ ನಮ್ಮ ಬೆಂಗಳೂರಿನ ಹೆಮ್ಮೆಯ ಪ್ರತೀಕ.. ಕರ್ನಾಟಕ ಕ್ರಿಕೆಟಿಗರ ಪ್ರೀತಿಯ ಮೈದಾನ. ಒಂದೇ ಒಂದು ಬಾರಿ ಚಿನ್ನಸ್ವಾಮಿ ಮೈದಾನದಲ್ಲಿ ಆಡಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟಿಗನÀ...

 ನೀವು ಕಳೆದುಕೊಂಡು ನಿಮ್ಮ ಆಸ್ತಿಪಾಸ್ತಿ ಮರಳಿ ಸಿದ್ದಿಸಿಕೊಳ್ಳಲು ಇಲ್ಲಿದೆ ಸುಲಭ ಕಾರ್ತವೀರ್ಯಾರ್ಜುನ ಸ್ವಾಮಿ ಮಂತ್ರದ ತಂತ್ರ ವಿಧಾನ..

 ನೀವು ಕಳೆದುಕೊಂಡು ನಿಮ್ಮ ಆಸ್ತಿಪಾಸ್ತಿ ಮರಳಿ ಸಿದ್ದಿಸಿಕೊಳ್ಳಲು ಇಲ್ಲಿದೆ ಸುಲಭ ಕಾರ್ತವೀರ್ಯಾರ್ಜುನ ಸ್ವಾಮಿ ಮಂತ್ರದ ತಂತ್ರ ವಿಧಾನ..

by admin
December 11, 2025
0

ನೀವು ಕಳೆದುಕೊಂಡು ನಿಮ್ಮ ಆಸ್ತಿಪಾಸ್ತಿ ಮರಳಿ ಸಿದ್ದಿಸಿಕೊಳ್ಳಲು ಇಲ್ಲಿದೆ ಸುಲಭ ಕಾರ್ತವೀರ್ಯಾರ್ಜುನ ಸ್ವಾಮಿ ಮಂತ್ರದ ತಂತ್ರ ವಿಧಾನ.. ಪ್ರತಿಯೊಬ್ಬರೂ ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಅಥವಾ ನಿಮಗೆ...

RCB ಅಭಿಮಾನಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

RCB ಅಭಿಮಾನಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

by Shwetha
December 11, 2025
0

ಬೆಂಗಳೂರು ಕ್ರಿಕೆಟ್ ಅಭಿಮಾನಿಗಳಿಗೆ, ವಿಶೇಷವಾಗಿ RCB ಫ್ಯಾನ್ಸ್‌ಗಳಿಗೆ ರಾಜ್ಯ ಸರ್ಕಾರದಿಂದ ಸಂತಸದ ಸುದ್ದಿ ಬಂದಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿರುವಂತೆ, ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಸೇರಿದಂತೆ ಕ್ರಿಕೆಟ್...

ಕರ್ನಾಟಕ ಭೂ ಕಂದಾಯ ಕಾಯ್ದೆ 1964: ಪ್ರಮುಖ ತಿದ್ದುಪಡಿ ಮಂಡನೆಗೆ ರಾಜ್ಯ ಸರ್ಕಾರ ಸಜ್ಜು

ಕರ್ನಾಟಕ ಭೂ ಕಂದಾಯ ಕಾಯ್ದೆ 1964: ಪ್ರಮುಖ ತಿದ್ದುಪಡಿ ಮಂಡನೆಗೆ ರಾಜ್ಯ ಸರ್ಕಾರ ಸಜ್ಜು

by Shwetha
December 11, 2025
0

ರಾಜ್ಯದಲ್ಲಿ ಭೂ ಸಂಬಂಧಿತ ಕಾನೂನುಗಳನ್ನು ಸ್ಮಾರ್ಟ್ ಮತ್ತು ಸುಗಮಗೊಳಿಸುವ ನಿಟ್ಟಿನಲ್ಲಿ ಬಹು ನಿರೀಕ್ಷಿತ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿ ಮಂಡನೆಗೆ ಬರುತ್ತಿದೆ. ರಾಜ್ಯ ರೆವಿನ್ಯೂ...

ಧರ್ಮಸ್ಥಳದ ವಿರುದ್ಧದ ಮಹಾ ಷಡ್ಯಂತ್ರ ಬಯಲು: ಶವ ಹೂತ ಕಥೆ ಕಟ್ಟಿದ ಬುರುಡೆ ಗ್ಯಾಂಗ್‌ಗೆ ಸಂಕಷ್ಟ, ಕ್ಷೇತ್ರಕ್ಕೆ ಸಿಕ್ತು ಕ್ಲೀನ್ ಚಿಟ್!

ಧರ್ಮಸ್ಥಳದ ವಿರುದ್ಧದ ಮಹಾ ಷಡ್ಯಂತ್ರ ಬಯಲು: ಶವ ಹೂತ ಕಥೆ ಕಟ್ಟಿದ ಬುರುಡೆ ಗ್ಯಾಂಗ್‌ಗೆ ಸಂಕಷ್ಟ, ಕ್ಷೇತ್ರಕ್ಕೆ ಸಿಕ್ತು ಕ್ಲೀನ್ ಚಿಟ್!

by Shwetha
December 11, 2025
0

ಬೆಳ್ತಂಗಡಿ: ನಾಡಿನ ಪವಿತ್ರ ಯಾತ್ರಾ ಸ್ಥಳ ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ದುರುದ್ದೇಶದಿಂದ ಹೆಣೆಯಲಾದ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಭಾರಿ ಷಡ್ಯಂತ್ರದ ಮುಖವಾಡ ಕಳಚಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram