ದಾವಣಗೆರೆ: ಕಿಲಾಡಿ ಮಹಿಳೆಯೊಬ್ಬರು ರೀಲ್ಸ್ ನಲ್ಲಿ ಮೋಡಿ ಮಾಡಿ ನಾಲ್ವರನ್ನು ಮದುವೆಯಾಗಿ ಪಂಗನಾಮ ಹಾಕಿರುವ ಘಟನೆಯೊಂದು ನಡೆದಿದೆ.
ಪತ್ನಿ ಕಾಣೆಯಾಗಿದ್ದಾಳೆಂದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದ. ಈ ಪ್ರಕರಣ ಬೆನ್ನಟ್ಟಿದ ಪೊಲೀಸರು ಈ ಪ್ರಕರಣ ಬೇಧಿಸಿದ್ದಾರೆ. ಇಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡಿ ಮೋಡಿ ಮಾಡುತ್ತಿದ್ದ ಮಹಿಳೆಯ ಪತಿಯಾಗಿದ್ದ ವ್ಯಕ್ತಿ ತನ್ನ ಹೆಂಡತಿ ಮಿಸ್ಸಿಂಗ್ ಆಗಿದ್ದಾಳೆ ಎಂದು ದಾವಣಗೆರೆ ಕೆಟಿಜೆ ನಗರ ಠಾಣೆಗೆ ದೂರು ನೀಡಿದ್ದ. ಆಕೆಯ ಸಂಬಂಧಿಕರಿಂದ ಆಕೆಯ ಚಾಲಾಕಿತನ ಗೊತ್ತಾಗಿ ಈಗ ಬೆಚ್ಚಿ ಬಿದ್ದಿದ್ದಾನೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ನರಹಳ್ಳಿ ಗ್ರಾಮದ ಯುವತಿಯನ್ನು ದಾವಣಗೆರೆ ನಿವಾಸಿ ಪ್ರಶಾಂತ್ ಮದುವೆಯಾಗಿದ್ದ. ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ. ಆನಂತರ ಇಬ್ಬರ ಸ್ನೇಹ, ಪ್ರೀತಿಗೆ ತಿರುಗಿ ಮದುವೆಯಾಗಿದ್ದರು. ಈ ಇಬ್ಬರು ಇನ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದರು. ಪರಿಚಯ ಲವ್ ಆಗಿ ಮಾರ್ಪಟ್ಟು, ಹಿರಿಯರ ಸಮ್ಮುಖದಲ್ಲೇ ಮದುವೆಯಾಗಿ 3 ತಿಂಗಳು ಸಂಸಾರ ಮಾಡಿದ್ದರು. 3 ತಿಂಗಳ ಹಿಂದೆ ತವರು ಮನೆಗೆ ಹೋಗಿ ನಂತರ ಗರ್ಭಿಣಿ ಎಂದು ಹೇಳಿ ಮರಳಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾನೆ.
ಆನಂತರ ಆತನಿಗೆ ಅವಳು ಮೋಸ ಮಾಡಿರುವ ವಿಷಯ ತಿಳಿದು ಬಂದಿದೆ. ಮೈಸೂರು ಹತ್ತಿರದ ಬೆಳಗೊಳ ಹತ್ತಿರ ಓರ್ವ ವ್ಯಕ್ತಿ, ನಂತರ ದಾವಣಗೆರೆ ಪ್ರಶಾಂತ್ ಹಾಗೂ ಬೆಂಗಳೂರು ರಘು ಎಂಬವರನ್ನು ಮದುವೆಯಾಗಿ ವಂಚಿಸಿದ್ದಾಳೆ ಎಂಬುವುದು ತಿಳಿದು ಬಂದಿದೆ. ಮಂಡ್ಯದ ಇನ್ನೊಬ್ಬ ಯುವಕನ ಜೊತೆ ಲವ್ವಿಡವ್ವಿಯಲ್ಲಿದ್ದಾನೆ ಎಂದು ತಿಳಿದು ಬಂದಿದೆ.