ನವದೆಹಲಿ: ಅಯೋಧ್ಯೆಯಿಂದ ಬಂದ ಪತ್ರ, ಅಕ್ಷತೆ, ರಾಮಮಂದಿರದ ಫೋಟೋ ಕಂಡು ಮುಸ್ಲಿಂ ಕರಸೇವಕ ಮೊಹಮ್ಮದ್ ಹಬೀಬ್ ಕಣ್ಣೀರಾಗಿದ್ದಾರೆ.
ಜ.22 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಬೀಬ್ ಮನೆಗೆ ಅಕ್ಷತೆ, ಪತ್ರ ಹಾಗೂ ರಾಮಮಂದಿರ ಫೋಟೋ ಕಳುಹಿಸಲಾಗಿದೆ. ‘ಅಕ್ಷತೆ ಪಡೆದು ಭಾವುಕನಾದೆ’ ಎಂದು ಭಾವುಕರಾಗಿದ್ದಾರೆ.
ನಾನು ಕರಸೇವಕ. 1992ರ ಡಿಸೆಂಬರ್ 2 ರಂದು ನಾಲ್ಕೈದು ದಿನಗಳ ಕಾಲ ಕರಸೇವಕರೊಂದಿಗೆ ಅಯೋಧ್ಯೆಯಲ್ಲಿ ಇದ್ದೆ ಎಂದು ಹೇಳಿದ್ದಾರೆ. ಜ. 22 ಇಡೀ ದೇಶಕ್ಕೆ ಐತಿಹಾಸಿಕ ದಿನವಾಗಿದೆ. ಈ ದಿನಕ್ಕಾಗಿ ನಾವು ತಪಸ್ಸು ಮಾಡಿದ್ದೇವೆ ಎಂದು ಭಾವುಕರಾಗಿದ್ದಾರೆ. ಪ್ರಾಣ ಪ್ರತಿಷ್ಠ ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸುತ್ತೇನೆ. ಮುಂದೆ ಯಾವುದಾದರೂ ಒಂದು ದಿನ ರಾಮಮಂದಿರಕ್ಕೆ ತೆರಳಿ ರಾಮನ ದರ್ಶನ ಮಾಡುತ್ತೇನೆ ಎಂದು ಹೇಳಿದ್ದಾರೆ.
ರಾಮ ನಮ್ಮ ಪೂರ್ವಜ. ರಾಮನು ಪ್ರತಿಯೊಂದು ಕಣದಲ್ಲೂ ನೆಲೆಸಿದ್ದಾನೆ. ನಾವು ನಮ್ಮ ಧರ್ಮಗಳನ್ನು ಬದಲಾಯಿಸಬಹುದು ಎಂದು ನಮಗೆಲ್ಲರಿಗೂ ಗೊತ್ತು. ಆದರೆ ನಾವು ನಮ್ಮ ಪೂರ್ವಜರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.








