ಪತಿಯ ನೆನಪಿನಲ್ಲಿ ಭಾವುಕ ಪತ್ರ ಬರೆದು ಹಲವರಿಗೆ ಧನ್ಯವಾದ ತಿಳಿಸಿದ ನಟಿ ಮಾಲಾಶ್ರೀ
ಬೆಂಗಳೂರು : ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..
ಈ ನಡುವೆ ಸ್ಯಾಂಡಲ್ ವುಡ್ , ಬಾಲಿವುಡ್ , ಟಾಲಿವುಡ್ , ಕಾಲಿವುಡ್ ನ ಅನೇಕ ಸಿನಿಮಾ ತಾರೆಯರು ಬಡವರಿಗೆ , ಕೋವಿಡ್ ಸೋಂಕಿತರಿಗೆ ತಮಗೆ ತೋಚಿದ ಸಹಾಯಗಳನ್ನ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ , ಶ್ರೀಮುರುಳಿ, ರಾಗಿಣಿ, ಅಕ್ಷಯ್ ಕುಮಾರ್ , ಸಲ್ಮಾನ್ ಖಾನ್ , ಸೋನು ಸೂದ್ , ಹೀಗೆ ಹಲವರು ಕಷ್ಟದ ಸಂದರ್ಭದಲ್ಲಿ ಸಹಾಯಾಸ್ತ ಚಾಚಿದ್ದಾರೆ.
ಮತ್ತೊಂದೆಡೆ ಅನೇಕ ಸೆಲೆಬ್ರಿಟಿಗಳು ಜೀವ ಕಳೆದುಕೊಂಡಿದ್ದಾರೆ.. ಇನ್ನೂ ಹಲವರು ತಮ್ಮರನ್ನ ಕಳೆದುಕೊಂಡ ದುಃಖದಲ್ಲಿದ್ದಾರೆ.
ಇತ್ತೀಚೆಗೆ ನಟಿ ಮಾಲಾಶ್ರೀ ಅವರ ಪತಿ ಹಾಗೂ ಸ್ಯಾಂಡಲ್ ವುಡ್ ನ ಹಿರಿಯ ನಿರ್ಮಾಕರಾದ ರಾಮು ಅವರು ಕೊರೊನಾಗೆ ಬಲಿಯಾಗಿದ್ದರು. ಏಪ್ರಿಲ್ 26 ರಂದುಅವರು ವಿಧಿವಶರಾಗಿದ್ದರು. ಆಗ ಮಾಲಾಶ್ರೀ ಅವರಿಗೆ ಅನೇಕರು ಧೈರ್ಯ ತುಂಬವ ಪ್ರಯತ್ನ ಮಾಡಿದ್ದರು. ಆದ್ರೆ ಇಷ್ಟು ದಿನಗಳ ಕಾಲ ಪತಿ ಕಳೆದುಕೊಂಡ ಧುಃಖದಲ್ಲಿದ್ದ ಮಾಲಾಶ್ರೀ ಈಗ ಭಾವುಕರಾಗಿ ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘ ಪತ್ರ ಬರೆದಿದ್ದು , ಅನೇಕರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.
‘ಕಳೆದ 12 ದಿನಗಳು ನನಗೆ ನನ್ನ ಕುಟುಂಬಕ್ಕೆ ತುಂಬಾ ನೋವಿನಿಂದ ಕೂಡಿದೆ. ನನಗೆ ದಾರಿ ಕಾಣದಾಗಿದೆ. ಪತಿ ರಾಮು ಅಗಲಿಕೆಯಿಂದ ನನ್ನ ಹೃದಯ ಛಿದ್ರವಾಗಿದೆ. ಅವರು ಯಾವಾಗಲು ನಮಗೆ ಬೆನ್ನೆಲುಬಾಗಿ ಇದ್ದರು. ಮತ್ತು ಸದಾ ಸಲಹೆ ನೀಡುತ್ತಿದ್ದರು’ ಎಂದಿದ್ದಾರೆ.
‘ಈ ಸಂಕಷ್ಟದ ಸಮಯದಲ್ಲಿ ಇಡೀ ಚಿತ್ರರಂಗ ಪ್ರೀತಿ ಮತ್ತು ಬೆಂಬಲ ತೋರಿದೆ. ಇದಕ್ಕೆ ನಾವು ಚಿರಋಣಿ. ಕಷ್ಟದ ಸಮಯದಲ್ಲಿ ಪ್ರೀತಿ, ಬೆಂಬಲ ತೋರಿದ ಪ್ರತಿಯೊಬ್ಬ ಸಿನಿಮಾ ಮಂದಿ, ಮಾಧ್ಯಮ, ಕಲಾವಿದರು, ನಿರ್ಮಾಪಕರು ತಂತ್ರಜ್ಞರು, ರಾಮು ಅಭಿಮಾನಿಗಳು, ಸ್ನೇಹಿತರು ಮತ್ತು ಹಿತೈಶಿಗಳಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.