ಭಾರತದ ತಾರಾ ಶಟ್ಲರ್ ಗಳಾದ ಪಿ.ವಿ.ಸಿಂಧು ಮತ್ತು ಎಚ್.ಎಸ್. ಪ್ರಣಯ್ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಕೌಲಾಲಂಪುರದಲ್ಲಿ ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಸಿಂಧು ಚೀನಾದ ಯಿ ಮಾನ್ ಜಾಂಗ್ ವಿರುದ್ಧು 21-16, 13-21, 22-20 ಅಂಕಗಳಿಂದ ಸೋಲಿಸಿದರು. ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ನಲ್ಲಿ ಪ್ರಣಯ್ ಜಪಾನ್ನ ಕೆಂಟಾ ನಿಶಿಮೊಟೊ 25-23, 18-21,21-13 ಅಂಕಗಳಿಂದ ಗೆದ್ದರು.
ಸಿಂಧು ಸೆಮಿಫೈನಲ್ನಲ್ಲಿ ವಿಶ್ವದ ನಂ.1 ಆಟಗಾರ್ತಿ ಇಂಡೋನೇಷ್ಯಾದ ಗ್ರೆಗೊರಿಯಾ ಮಾರಿಸ್ಕಾ ತುನಜಂಗ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ನಲ್ಲಿ ಪ್ರಣಯ್ ಕೆಂಟಾ ನಿಶಿಮೊಟೊ ವಿರುದ್ಧ 25-23,18-21, 21-13 ಅಂಕಗಳಿಂದ ಗೆದ್ದರು. ಮತ್ತೊಂದು ಪುರುಷರ ಸಿಂಗಲ್ಸ್ನಲ್ಲಿ ಶ್ರೀಕಾಂತ್ ಎದುರಾಳಿ ಅದಿನಾಟಾ ವಿರುದ್ಧ 21-16, 16-21, 11-21 ಅಂಕಗಳಿಂದ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು.