ರಾಷ್ಟ್ರ ಗೀತೆಗೆ ಅಗೌರವ ತೋರಿದ ಮಮತ ಬ್ಯಾನರ್ಜಿ. FIR ದಾಖಲು

1 min read

ರಾಷ್ಟ್ರ ಗೀತೆಗೆ ಅಗೌರವ ತೋರಿದ ಮಮತ ಬ್ಯಾನರ್ಜಿ. FIR ದಾಖಲು

ಮುಂಬೈ ಬಿಜೆಪಿ ಘಟಕದ ಪದಾಧಿಕಾರಿಯೊಬ್ಬರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂಬೈ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದಾರೆ ಮತ್ತು ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.

ಮುಂಬೈಗೆ ಭೇಟಿ ನೀಡಿದ್ದ ಬ್ಯಾನರ್ಜಿ ಅವರು ರಾಜ್ಯದಲ್ಲಿ ಆಡಳಿತಾರೂಢ ಶಿವಸೇನೆ ಮತ್ತು ಎನ್‌ಸಿಪಿ ನಾಯಕರನ್ನು ಭೇಟಿಯಾಗಿದ್ದರು. ಪತ್ರಿಕಾಗೋಷ್ಠಿಯ ವೇಳೆ ಅರ್ಧಬಂರ್ಧ ರಾಷ್ಟ್ರಗೀತೆಯನ್ನು ಹೇಳಿ ಜೈ ಮಹಾರಾಷ್ಟ್ರ ಎನ್ನುವ ಮೂಲಕ ಅದನ್ನು ಅರ್ಧದಲ್ಲಿಯೇ ನಿಲ್ಲಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕುಳಿತಲ್ಲಿನಿಂದಲೇ ಜನಗಣಮನ ಎಂದು ಏಕಾಏಕಿ ಶುರು ಮಾಡಿದ ಮಮತಾ, ಒಂದೆರಡು ಸಾಲು ಹೇಳುತ್ತಲೇ ಎದ್ದುನಿಂತರು. ಆಗ ಅವರ ಜತೆ ಅಲ್ಲಿದ್ದವರು ಎಲ್ಲರೂ ಎದ್ದುನಿಂತರು, ನಂತರ ಮುಂದಿನ ಒಂದು ಪ್ಯಾರಾ ರಾಷ್ಟ್ರಗೀತೆ ಹೇಳಿ ಜೈಮಹಾರಾಷ್ಟ್ರ ಎಂದು ನಿಲ್ಲಿಸಿಯೇ ಬಿಟ್ಟರು.

ಮುಂಬೈ ಬಿಜೆಪಿ ಘಟಕದ ಕಾರ್ಯದರ್ಶಿ ವಿವೇಕಾನಂದ ಗುಪ್ತಾ ಅವರು ನಗರ ಪೊಲೀಸ್ ಕಮಿಷನರ್ ಹೇಮಂತ್ ನಗ್ರಾಳೆ ಅವರಿಗೆ ಪತ್ರ ಬರೆದಿದ್ದಾರೆ, “ಮಮತಾ ಬ್ಯಾನರ್ಜಿ ಅವರು ರಾಷ್ಟ್ರಗೀತೆಯನ್ನು ಏಕಾಏಕಿ ನಿಲ್ಲಿಸಿದ ಕ್ರಮವು ರಾಷ್ಟ್ರ ಗೀತೆಗೆ ಸಂಪೂರ್ಣ ಅಗೌರವವನ್ನು ತೋರಿಸುತ್ತದೆ. ಗೌರವ ಕಾಯಿದೆ-1971 ಸೆಕ್ಷನ್ 3 ರ ಅಡಿಯಲ್ಲಿ ಅಪರಾಧ ಮಾಡಿದ್ದಾರೆ ಎಂದು ಆರೋಪಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd