ಗರ್ಭಿಣಿ ಹೆಂಡತಿ , ಪುಟ್ಟ ಮಕ್ಕಳು , ಅತ್ತೆಯನ್ನ ಬರ್ಬರವಾಗಿ ಹತ್ಯೆಗೈದ ಕುಡುಕ
ಮೈಸೂರು: ಮದ್ಯ ವ್ಯಸನಿಯೊಬ್ಬ ತನ್ನ ಗರ್ಭಿಣಿ ಹೆಂಡತಿ, ಪುಟ್ಟ ಪುಟ್ಟ ಮಕ್ಕಳು ಹಾಗೂ ಅತ್ತೆಯನ್ನ ರ್ಬರವಾಗಿ ಹತ್ಯೆಗೈದಿರುವ ಘಟನೆ ಮೈಸೂರಿನ ಚಾಮೇಗೌಡನಹುಂಡಿ ಗ್ರಾಮದಲ್ಲಿ ನಡೆದಿದೆ.
ನಾಲ್ವರನ್ನ ಕೊಲೆ ಮಾಡಿರುವ ಪಾಪಿ ಈಗ ತಲೆಮರೆಸಿಕೊಂಡಿದ್ಧಾನೆ.
ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ನಾಲ್ವರನ್ನೂ ಕೊಲೆ ಮಾಡಿರುವ ಅನುಮಾನವನ್ನ ಪೊಲೀಸರು ವ್ಯಕ್ತಪಡಿಸಿದ್ದು, ಆರೋಪಿಯ ಸೆರೆಗೆ ಬಲೆ ಬೀಸಿದ್ದಾರೆ.
ಮಣಿಕಂಠಸ್ವಾಮಿ ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿಯಾಗಿದ್ದಾನೆ.
ಅತ್ತೆ ಕೆಂಪಾಜಮ್ಮ(60), ಗರ್ಭಿಣಿ ಪತ್ನಿ ಗಂಗಾ(28), ಮಗ ರೋಹಿತ್(4) ಮತ್ತು ಮಗ ಸಾಮ್ರಾಟ್(2) ಮೃತ ದುರ್ದೈವಿಗಳಾಗಿದ್ದಾರೆ.
ಘಟನಾ ಸ್ಥಳಕ್ಕೆ ಸರಗೂರು ಪಿಎಸ್ಐ ದಿವ್ಯಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರಗೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.