ತಮ್ಮನ ಮೋಹ | ಅಣ್ಣನ ಬಲಿ | ಪಾಪ ಅತ್ತಿಗೆ ಏನು ಮಾಡಿಯಾಳು
ಉತ್ತರಪ್ರದೇಶ: ಅಣ್ಣನ ಪತ್ನಿ (ಅತ್ತಿಗೆ) ಯ ಮೇಲೆ ಮೋಹಿತಗೊಂಡು ತಮ್ಮ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.
ಮೋಹಿತ್ ಸಹು ಮೃತ ದುರ್ದೈವಿ, ಭೂಪೇಂದ್ರ ಸಹು ಕೊಲೆ ಮಾಡಿದ ಆರೋಪಿ ಎಂದು ಗುರುತಿಲಸಾಗಿದೆ. ಭೂಪೇಂದ್ರ ಸಹು ಅತ್ತಿಗೆಯ ಮೇಲೆ ಮೋಹಗೊಂಡಿದ. ಹೀಗಾಗಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದ. ಅತ್ತಿಗೆ, ಇದನ್ನು ಪತ್ನಿ ಪತಿಗೆ ತಿಳಿಸಿದ್ದಾಳೆ. ಅಣ್ಣ ಮೋಹಿತ್ ಸಹು, ತಮ್ಮ ಭೂಪೇಂದ್ರ ಸಹುಗೆ ಬುದ್ದಿವಾದ ಹೇಳಲು ಹೋದಾಗ, ತಮ್ಮ ಅಣ್ಣನನ್ನೇ ಕೊಲೆ ಮಾಡಿದ್ದಾನೆ.
ನಡೆದಿದ್ದೇನು?: ಮೂವರು ಒಂದೇ ಮನೆಯಲ್ಲಿ ವಾಸವಾಗಿದ್ದರು. ಮೊದ ಮೊದಲು ಎಲ್ಲವೂ ಸರಿಯಾಗೆ ಇತ್ತು. ಆದರೆ ಇತ್ತೀಚಿಗೆ ಭೂಪೇಂದ್ರ ಸಹು ಅತ್ತಿಗೆಯನ್ನು ಪ್ರೀತಿಸಲು ಪ್ರಾರಂಭಿಸಿದ್ದಾನೆ. ಅತ್ತಿಗೆಯ ಮೇಲೆ ಮೋಹಗೊಂಡ ಆರೋಪಿ ಆಕೆಯೊಂದಿಗೆ ಸಲಿಗೆಯಿಂದ ವರ್ತಿಸಲು ಪ್ರಾರಂಭಿಸಿದ್ದ. ಅಲ್ಲದೇ ಆಕೆಗೆ ಸಹಾಯ ಮಾಡುವ ನೆಪದಲ್ಲಿ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ. ಇದರಿಂದ ಕಿರಿ ಕಿರಿ ಅನುಭವಿಸುತ್ತಿದ್ದ, ಪತ್ನಿ ತನ್ನ ಪತಿಗೆ ವಿಷಯ ತಿಳಿಸಿದ್ದಾಳೆ.
ಮೋಹಿತ ತನ್ನ ಸಹೋದರನಿಗೆ ಬುದ್ದಿ ಹೇಳಲು ಹೋಗಿದ್ದ. ಈ ವೇಳೆ ಇಬ್ಬರ ನಡುವೆ ಮಾತುಕತೆ, ವಾಗ್ವಾದಕ್ಕೆ ತಿರುಗಿದೆ. ಈ ಸಂಬಂಧ ಗಲಾಟೆ ಉಂಟಾಗಿ, ಭೂಪೇಂದ್ರ ಮೋಹಿತ್ ಕುತ್ತಿಗೆಯನ್ನು ಸೀಳಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಖಾಸಿಮ್ ಅಬಿಡಿ ತಿಳಿಸಿದ್ದಾರೆ.
ಮೋಹಿತ್ ಮತ್ತು ಭೂಪೇಂದ್ರ ನಡುವೆ ಗಲಾಟೆಯಾಗಿ, ಮೋಹಿತ ಹತ್ಯೆಯಾಗುವ ಹೊತ್ತಿನಲ್ಲಿ ಆತನ ಪತ್ನಿ ಮನೆಯ ಮಹಡಿ ಮೇಲೆ ನಿದ್ರಿಸುತ್ತಿದ್ದರು. ಆದರೆ ನಂತರ ಕೆಳಗೆ ಬಂದ ತುಂಬ ಶಾಕ್ ಆದರು. ಭೂಪೇಂದ್ರ ತಾನು ಅಪರಾಧ ಮಾಡಿದ್ದಲ್ಲದೆ, ಅದನ್ನು ಮೋಹಿತ್ ಪತ್ನಿ ತಲೆಗೆ ಕಟ್ಟಲೂ ಪ್ರಯತ್ನಿಸಿದ. ತಮ್ಮಿಬ್ಬರ ಮಧ್ಯೆ ಜಗಳ ಹುಟ್ಟುಹಾಕಿದ್ದೇ ಅವಳು ಎಂದೂ ಪೊಲೀಸರ ಬಳಿ ಹೇಳಿದ್ದಾನೆ ಎನ್ನಲಾಗಿದೆ.