Manchu Manoj : ಭೂಮಾ ಮೌನಿಕಾ ರೆಡ್ಡಿ ಜೊತೆ ಎರಡನೇ ಮದುವೆಯಾದ ಮಂಚು ಮನೋಜ್…
ತೆಲುಗು ಸೂಪರ್ ಸ್ಟಾರ್ ನಟ ಮೋಹನ್ ಬಾಬು ಅವರ ಪುತ್ರ ನಟ ಮಂಚು ಮನೋಜ್ ಭೂಮಾ ಮೌನಿಕಾ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ಮಂಚು ಮನೋಜ್ ಅವರಿಗ ಇದು ಎರಡನೇ ಮದುವೆ.
ಶುಕ್ರವಾರ ಹೈದರಾಬಾದ್ನಲ್ಲಿ ಮಂಚು ಮನೋಜ್ ಅವರ ಅಕ್ಕ ಲಕ್ಷ್ಮಿ ಮಂಚು ಅವರ ಫಿಲ್ಮ್ನಗರದ ನಿವಾಸದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ಕಾರ್ಯಗಳು ನೆರವೇರಿವೆ. ಮೋಹನ್ ಬಾಬು, ವಿಷ್ಣು ಮಂಚು ಸೇರಿದಂತೆ ಕುಟುಂಬದ ಸದಸ್ಯರು ನವದಂಪತಿಗಳಿಗೆ ಆಶೀರ್ವದಿಸಿದರು.
ಮದುವೆಗೆ ಸಂಬಂಧಿಸಿದ ಫೋಟೋಗಳನ್ನ ಸಹ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಈ ಫೋಟೋಗಳಲ್ಲಿ ಮಂಚು ಫ್ಯಾಮಿಲಿ ಜೊತೆಗೆ ಭೂಮಾ ಫ್ಯಾಮಿಲಿ ಕೂಡ ನವದಂಪತಿಗಳನ್ನು ಖುಷಿಯಿಂದ ಆಶೀರ್ವದಿಸುತ್ತಿದ್ದಾರೆ.
ಮದುವೆಗೆ ಸಂಬಂಧಿಸಿದಂತೆ ನಟ ಮಂಚು ಮನೋಜ್ ಇನ್ಸ್ಟಾಗ್ರಾಂನಲ್ಲಿ ಆಸಕ್ತಿದಾಯಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. “ ಅಕ್ಕ ಯಾವ ಜನ್ಮದ ಪುಣ್ಯವೋ ನನ್ನದು “ ತುಂಬಾ ಧನ್ಯವಾಧಗಳು ಎಂದು ಅಕ್ಕ ಮಂಚು ಲಕ್ಷ್ಮಿ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ.
Manchu Manoj : Manchu Manoj married Bhuma Mounika Reddy